ನೆಲಮಂಗಲ: ಹಿಂದಿನ ಪೌರಾಣಿಕ ನಾಟಕಗಳು ಮಾನವನ ಸುಸಂಸ್ಕೃತ ಜೀವನಕ್ಕೆ ಹಾಗೂ ಬದುಕಿಗೆ ಮೌಲ್ಯಗಳನ್ನ ಸೂಚಿಸುವ ದಾರಿ ದೀಪಾಗಳಾಗಿವೆ ಎಂದು ವಕೀಲ ವಿಜಯಕುಮಾರ್ ತಿಳಿಸಿದರು.
ನಗರದ ಶ್ರೀನಿವಾಸ ಸಮುದಾಯ ಭವನದ ಪಕ್ಕ ರಾಜೀವ್ ಗಾಂಧಿ ಯುವಕರ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ನಾಟಕೋತ್ಸವ ಕಾರ್ಯಕ್ರಮದ ಕೊನೆಯದಿನ ಕಲಾ ಸಂಘದಿಂದ ನಡೆದ ಕುರುಕ್ಷೇತ್ರನಾಟಕ ಕಾರ್ಯಕ್ರಮದಲ್ಲಿ ನಾಟಕೋತ್ಸವ ವನ್ನು ಉದ್ದೇಶಿಸಿ ಮಾತಾನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಪೌರಣೀಕ ನಾಟಕಗಳು ಕಣ್ಮರೆಯಾಗುತ್ತಿದ್ದು ಇಂದಿನ ಯುವಪೀಳಿಗೆಯು ವಾಟ್ಸಪ್, ಪೋಸ್ ಬುಕ್ಕನಲ್ಲಿ ಮಾರುಹೋಗಿದ್ದು, ಕಲೆಗಳು ಆಳುವಿನ ಹಂಚಿಗೆ ಬಂದು
ತಲುಪಿದೆ. ಇಂತಹ ಸಂದರ್ಭದಲ್ಲಿ ಪೌರಣೀಕ ನಾಟಕಗಳನ್ನು ನಡೆಸುತ್ತಿರುವುದು ಸಂತೋಷದ ಸಂಗತಿ ಸಮಾಜಕ್ಕೆ ಜ್ಞಾನ, ಹರಿವು ಬೆಳೆವಣಿಗೆಗೆ ಪೌರಾಣಿಕ ನಾಟಕಗಳು ಸಹಕಾರಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕುರುಕ್ಷೇತ್ರ ನಾಟಕ ಪ್ರದರ್ಶನದಲ್ಲಿ ದುರ್ಯೋಧನನ ಪಾತ್ರದಾರಿಯಾದ ಭಕ್ತನ ಪಾಳ್ಯ ಕೃಷ್ಣಮೂರ್ತಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಮನಗೆದ್ದು ಉತ್ತಮ ಪ್ರಶಂಸೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಾಂಗ್ರೇಸ್ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಕಾರ್ಮಿಕ ನಿರೀಕ್ಷಿತರಾದ ಸಿ.ಡಿ ನಾಗರತ್ನ ಹಿರಿಯ ಕಲಾವಿದ ಮುನಿರಾಜು ಹನುಮಂತರಾಜು, ಜ್ಯೋತಿರ್ಲಿಂಗಪ್ಪ ನೆಲಮಂಗಲ ಶಾಂತರಾಜ್ ಕಲಾವಿದ ರಾದ ಚಿಕ್ಕಮಾರನಹಳ್ಳಿ ದಿನೇಶ್ ಕೆಂಪಲಿಂಗನಹಳ್ಳಿ ಉಮೇಶ್ ಪುಟ್ಟ ಸಿದ್ದಯ್ಯ ದೇವರಾಜ್ ಸಂಪತ್ ಹನುಮಂತರಾಜು ರೈತ ಸಂಘಟನೆಯ ಕಾರ್ಯದರ್ಶಿ ಚಂದ್ರಶೇಖರ್ ರಾಮಣ್ಣ ರಂಗಸ್ವಾಮಿ, ಇನ್ನೂ ಮಂತಾದ ಕಲಾವಿದರು, ಕಲಾಸಂಘದ ಅಧ್ಯಕ್ಷ ಡಿ ವಿ ಭಾರತಿ ಗೋವಿಂದರಾಜು, ಕಾರ್ಯದರ್ಶಿ ಮತ್ತಿತರು ಉಪಸ್ಥಿತರಿದ್ದರು.