ನೆಲಮಂಗಲ: ಜ್ಞಾನ ಭಾರತಿ ಚಾರಿಟಬಲ್ ಟ್ರಸ್ಟ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಾಟಕೋತ್ಸವ ಕಾರ್ಯಕ್ರಮವು ನಡೆಯುತ್ತಿದ್ದು ಇದರಲ್ಲಿ ‘ಸಂಪೂರ್ಣ ರಾಮಾಯಣ’ ಎಂಬ ಪೌರಾಣಿಕ ನಾಟಕವು ನಡೆಯಿತು.
ನಗರದ ಶ್ರೀನಿವಾವಾಸ ಸಮುದಾಯ ಭವನದ ಪಕ್ಕದಲ್ಲಿ ನಡೆದ ನಾಟಕದ ಕಾರ್ಯಕ್ರಮದಲ್ಲಿ ಆರು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಹಿರಿಯ ಕಲಾವಿದರಾದ ಜ್ಯೋತಿರ್ಲಿಂಗಪ್ಪ, ಮುನಿರಾಜು, ಕೃಷ್ಣಮೂರ್ತಿ ರಾವ್, ಪತ್ರಕರ್ತ ಭಾನುಪ್ರಕಾಶ್, ಮಾಧ್ಯಮ ರತ್ನ ಪ್ರಶಸ್ತಿಯನ್ನು ಹಾಗೂ ಮಾದರಿ ರೈತರಾದ ಬಸವರಾಜು, ರಾಮಯ್ಯ ಅವರಿಗೆ ಪ್ರೋತ್ಸಾಹ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಕಲಾವಿದೆ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಚ್.ನಾಗರತ್ನಮ್ಮ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ರಮೇಶ್, ತಾಲೂಕು ಅಧ್ಯಕ್ಷ ಕೃಷ್ಣಪ್ಪ(ಕಿಟ್ಟಿ), ಮಾಜಿ ಕಾರ್ಯದರ್ಶಿ ಶಾಂತರಾಜು, ಕಲಾವಿದರಾದ ಕೆಂಪಲಿಂಗನಹಳ್ಳಿ ಉಮೇಶ್, ಪುಟ್ಟಸಿದ್ದಯ್ಯ, ದೇವರಾಜ್, ಸಂಪತ್, ಹನುಮಂತರಾಜು, ರೈತ ಸಂಘಟನೆಯ ಕಾರ್ಯದರ್ಶಿ ಚಂದ್ರಶೇಖರ್ ಸೇರಿದಂತೆ ಹಲವಾರು ಕಲಾವಿದರಿದ್ದರು. ಟ್ರಸ್ಟ್ ಅಧ್ಯಕ್ಷ ರಂಗನಾಥ್ ಕಲಾವಿದರನ್ನು ಸನ್ಮಾನಿಸಿದರು. ಕಾರ್ಯದರ್ಶಿ ರಾಜೇಶ್ ಕುಮಾರ್, ಖಜಾಂಚಿ ಸುಶೀಲಮ್ಮ ಇತರರಿದ್ದರು.