ಬಂಗಾರಪೇಟೆ: ಪುರಸಭಾ ಕಾರ್ಯಾ ಲಯ ವತಿಯಿಂದ ಪೌರಕಾರ್ಮಿಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪ ಣೆಗೊಳಿಸಿ Sಓ ಮಿನಿ ಹಾಲಿನಲ್ಲಿ ಕಾರ್ಮಿಕರ ದಿನಾಚರಣೆಯನ್ನು ನೂತನವಾದ ಅಧ್ಯಕ್ಷರಾದ ಗೋವಿಂದರವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಇದೇ ವೇಳೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಮಾತನಾಡಿ ಪೌರಕಾರ್ಮಿಕರ ಕೆಲಸ ಬಹಳ ತೊಂದರೆಯುಳ್ಳ ಕೆಲಸವಾಗಿದ್ದು ಕೆಲಸವನ್ನು ನೀವು ಶ್ರದ್ಧಾ ಭಕ್ತಿಯಿಂದ ಮಾಡುತ್ತಿರುವುದಕ್ಕಾಗಿ ನಿಮಗೆ ಕೃತಜ್ಞತೆಗಳನ್ನು ಸಲ್ಲಿಸಿ ಪೌರ ಕಾರ್ಮಿಕರಿಗೆ ಬೇಕಾದಂತಹ ಸ್ವಚ್ಛತೆಗೆ ಬಳಸುವಂತಹ ಹ್ಯಾಂಡ್ ಗ್ಲೌಸ್ ಮತ್ತು ಟೈಯರ್ ಶೂಸ್ ಜಾಕೆಟ್ ಗಳನ್ನು ಪುರಸಭೆಯಿಂದ ಒದಗಿಸಿಕೊಡಲಾಗುತ್ತದೆ ನೀವು ನಗರವನ್ನ ಸ್ವಚ್ಛತೆಯಾಗಿಟ್ಟಲ್ಲೇ ಮುಂಬರುವ ಪುರಸಭೆಯ ಚುನಾವಣೆಯಲ್ಲಿ ಈ ಮೇಲೆ ಕುಳಿತಿರುವಂತಹ ಸದಸ್ಯರು ಮತ್ತೆ ಆಯ್ಕೆಯಾಗಿ ಬರುತ್ತಾರೆ ಹಾಗೂ ನಿಮ್ಮ ಕುಟುಂಬಕ್ಕೆ ಆರೋಗ್ಯದ ಹಿತದೃಷ್ಟಿಯಿಂದ ವಿಮೆಯನ್ನು ಮಾಡಿಕೊಡಲಾಗುವುದೇ ಎಂದೋ ಬರವಸೆ ನೀಡಿದರು ಹಾಗೂ ಕೋಲಾರ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದಂತ ಪುರಸಭೆ ಇದಾಗಿದೆ ಎಂದು ತಿಳಿಸಿದರು.
ಮುಂಬರುವ ವರ್ಷದಲ್ಲಿ ಹೆಣ್ಣು ಮಕ್ಕಳಿಗೆ ಹಾಗೂ ಗಂಡು ಮಕ್ಕಳಿಗೆ ಸಮವಸ್ತ್ರವನ್ನು ನಾನೇ ವಿತರಣೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಗೋವಿಂದ ಮಾತನಾಡಿ ನೀವು ಮಾಡುವ ಕೆಲಸ ಜಿಲ್ಲೆಗೆ ಮಾದರಿಯಾಗಿರಬೇಕು ಹೊಸ ಬಗ್ಗೆ ಕೀರ್ತಿ ತರುವಂತಹ ಕಾರ್ಯಕ್ಕೆ ನೀವು ಮುಂದಾಗಬೇಕಾಗಿದೆ ಎಂದು ಕಿವಿಮಾತು ತಿಳಿಸಿದರು. ಸಂದರ್ಭದಲ್ಲಿ ಪುರಸಭಾ ಸದಸ್ಯರುಗಳು ಅಧ್ಯಕ್ಷರು ಉಪಾಧ್ಯಕ್ಷರು ನಾಗವೇಣಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸತ್ಯನಾರಾಯಣ, ಗೋವಿಂದರಾಜು, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.