ಕುಣಿಗಲ್: ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಸ್.ಬಲರಾಮ ಅವರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಪೌರ ಕಾರ್ಮಿಕ ಪಾದ ತೊಳೆದು, ಪಾದಪೂಜೆ ನೆರವೇರಿಸಿ, ಸನ್ಮಾನಿಸಿ, ಸಿಹಿ ತಿಂಡಿ ತಿನಿಸುವ ಮೂಲಕ ಗಮನ ಸೆಳೆದಿದ್ದಾರೆ.ಪಟ್ಟಣದ ಭೋವಿ ಕಾಲೋನಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯದ ಬಳಿ ಕೆ.ಎಸ್.ಬಲರಾಮ ಅವರ 50 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪೌರ ಕಾರ್ಮಿಕ ಸಂಘದ ಅಧ್ಯಕ್ಷೆ ಕೆಂಪಮ್ಮ ಸೇರಿದಂತೆ 13 ಜನ ಪೌರ ಕಾರ್ಮಿಕರ ಪಾದ ತೊಳೆದು, ಅರಿಶಿಣ ಕುಕ್ಕಮ್ಮ ಇಟ್ಟು, ಹೂ ಹಾಕಿ ಪಾದ ಪೂಜೆ ಮಾಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡರು .
ಬಳಿಕ ಮಾತನಾಡಿದ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಸ್.ಬಲರಾಮ ಪಟ್ಟಣವನ್ನು ಸ್ವಚ್ಛ ಮಾಡಿ ನಾಗರೀಕರನ್ನು ಆರೋಗ್ಯವಂತರಾಗಿ ಮಾಡುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರವಾಗಿದೆ, ಅವರ ಆರೋಗ್ಯವನ್ನು ಲೆಕ್ಕಿಸದೇ ಸ್ವಚ್ಛತೆ ಕೆಲಸದಲ್ಲಿ ನಿರತವಾಗಿರುವ ಎಲ್ಲಾ ಪೌರ ಕಾರ್ಮಿಕ ಸೇವೆ ಸಮಾಜಕ್ಕೆ ಅತಿ ಮುಖ್ಯವಾಗಿದೆ ಎಂದು ಹೇಳಿದರು.
ಪೌರ ಕಾರ್ಮಿಕರನ್ನು ಕೀಳಿರಿಮೆ ನೋಡಬೇಡಿ: ಸಮಾಜದಲ್ಲಿ ಪೌರ ಕಾರ್ಮಿಕರನ್ನು ಕೀಳಿರಿಮೆಯಿಂದ ನೋಡಬಾರದು, ಅವರನ್ನು ನಮ್ಮಂತೆ ಸಮಾನರಾಗಿ ಕಾಣಬೇಕೆಂದು ಹೇಳಿದರು, ಪೌರ ಕಾರ್ಮಿಕರ ದಿನದಂದು ನನ್ನ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್,ಮಂಜುನಾಥ್ ಅವರ ಹುಟ್ಟಿರುವುದು ನಾವು ಪುಣ್ಯ ಮಾಡಿದ್ದೇವೆ ಎಂದು ಹೇಳಿದರು.
ಈ ವೇಳೆ ಪುರಸಭಾ ಸದಸ್ಯ ಆನಂದ್ಕುಮಾರ್(ಕಾಂಬ್ಲಿ), ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವರಾಜು, ಬಿಜೆಪಿ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಕೆ.ಎನ್.ಜಗನಾಥ್, ತುಮಕೂರು ಸಂದೀಪ್, ಮುಖಂಡರಾದ ಲೋಕೇಶ್, ಕುಮಾರ್, ಮತ್ತಿತರರು ಇದ್ದರು.