ನವದೆಹಲಿ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಯೋತ್ಪಾದನಾ ದಾಳಿ ತಡೆ ಭದ್ರತಾ ಕಾರ್ಯಕ್ಕಾಗಿ ಭಾರತೀಯ ಸೇನೆಯಲ್ಲಿ ತರಬೇತುಗೊಂಡ ಶ್ವಾನದಳವನ್ನು ನಿಯೋಜಿಸಲಾಗಿದೆ.ಕೇಂದ್ರ ಸಶಸ್ತ್ರಪೊಲೀಸ್ ಪಡೆ (ಸಿಎಪಿಎಫ್) ಮತ್ತು ವಿಶೇಷ ಕಮಾಂಡೊ ಪಡೆಯ ಭಾರತೀಯ ಕೆ9 (ಕೆನೈನ್) ಹತ್ತು ಶ್ವಾನಗಳ ಪಡೆಯನ್ನು ಪ್ಯಾರಿಸ್ಗೆ ಕಳುಹಿಸಲಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿರುವ ಭದ್ರತಾ ಪಡೆಗಳೊಂದಿಗೆ ಈ ಶ್ವಾನಪಡೆಯು ಕಾರ್ಯನಿರ್ವಹಿಸಲಿದೆ.‘ಈ ಶ್ವಾನಗಳಿಗೆ ಹತ್ತು ವಾರಗಳಿಂದ ವಿಶೇಷ ತರಬೇತಿ ನೀಡಲಾಗಿದೆ. ಭಾರತ ಮತ್ತು ಫ್ರೆಂಚ್ ಸರ್ಕಾರದ ಮನವಿಯ ಮೇರೆಗೆ ಶ್ವಾನಪಡೆ ಮತ್ತು ಅವುಗಳ ನಿರ್ವಾಹಕ ಸಿಬ್ಬಂದಿಯನ್ನು ಕಳುಹಿಸಿಕೊಡಲಾಗಿದೆ’ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಎಪಿಎಫ್, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್), ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ), ಇಂಡೋ ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಗಳಿಂದ ಈ ಶ್ವಾನ ಮತ್ತು ನಿರ್ವಹಾಕರನ್ನು ಆಯ್ಕೆ ಮಾಡಲಾಗಿದೆ.ಈ ಶ್ವಾನಪಡೆಯಲ್ಲಿರುವ ಬೆಲ್ಜಿಯನ್ ಮೆಲಿನೊಸ್ ತಳಿಯು ಪ್ರಮುಖವಾಗಿದೆ. ಬಾಂಬ್ ಪತ್ತೆ ಕಾರ್ಯಾಚರಣೆಯಲ್ಲಿ ಅತ್ಯಂತ ಚುರುಕಾದ ತಳಿ ಇದಾಗಿದೆ.
ಆಂತರಿಕ ಭದ್ರತೆ, ನಕ್ಸಲ್ ನಿಗ್ರಹ ಕಾರ್ಯಾಚರಣೆ ಮತ್ತು ಭಯೋತ್ಪಾದಕ ಚಟುವಟಿಕೆ ನಿಗ್ರಹದಲ್ಲಿ ಈ ಶ್ವಾನಗಳು ಕಾರ್ಯನಿರ್ವಹಿಸುತ್ತವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸಿಆರ್ಪಿಎಫ್ನ ಶ್ವಾನ ವಾಸ್ಟ್ (5 ವರ್ಷ) ಮತ್ತು ಡೆನ್ಬಿ (3 ವರ್ಷ) ಈ ಪಡೆಯಲಿವೆ.ಬೆಂಗಳೂರು ಸಮೀಪದ ತರಳುವಿನಲ್ಲಿರುವ ಸಿಆರ್ಪಿಎಫ್ ಶ್ವಾನ ತಳಿ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರದಲ್ಲಿ ಈ ಶ್ವಾನಪಡೆಯ ಸಾಮರ್ಥ್ಯ ಪರೀಕ್ಷೆ ನಡೆಸಿದ ನಂತರ ಪ್ಯಾರಿಸ್ಗೆ ಕಳುಹಿಸಲಾಗಿದೆ.