ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ಗಾಗಿ ಕ್ರೀಡಾಗ್ರಾಮವನ್ನು ಗುರುವಾರ ಅಧಿಕೃತವಾಗಿ ತೆರೆಯಲಾಯಿತು.ಪ್ಯಾರಿಸ್ ಉತ್ತರ ಭಾಗದಲ್ಲಿರುವ ಕ್ರೀಡಾಗ್ರಾಮವು 9 ಸಾವಿರ ಕ್ರೀಡಾಪಟುಗಳು ಸೇರಿದಂತೆ ಸುಮಾರು 14,500 ಮಂದಿಗೆ ವಸತಿ ವ್ಯವಸ್ಥೆ ಕಲ್ಪಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ.
ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಎಂಟು ದಿನ ಬಾಕಿ ಉಳಿದಿದ್ದು, ಈಗಾಗಲೇ ಆಸ್ಟ್ರೇಲಿಯಾ ಮತ್ತು ಬ್ರೆಜಿಲ್ನಿಂದ ಬಂದ ಮೊದಲ ತಂಡದ ಸದಸ್ಯರನ್ನು ಕ್ರೀಡಾಗ್ರಾಮಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.‘ನಾವು ಸಿದ್ಧರಾಗಿದ್ದೇವೆ’ ಎಂದು ಕ್ರೀಡಾಗ್ರಾಮದ ಉಪ ಮುಖ್ಯಸ್ಥ ಆಗಸ್ಟಿನ್ ಟ್ರಾನ್ ವ್ಯಾನ್ ಚೌ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಜುಲೈ 26ರಿಂದ ಮತ್ತು ಸೆಪ್ಟೆಂಬರ್ 8ರ ನಡುವೆ ಒಲಿಂಪಿಯನ್ಗಳು ಮತ್ತು ಪ್ಯಾರಾಲಿಂಪಿಯನ್ಗಳು ಬಳಸಿದ ನಂತರ ಕ್ರೀಡಾಗ್ರಾಮದಲ್ಲಿರುವ ಅಪಾರ್ಟ್ಮೆಂಟ್ಗಳನ್ನು ಮನೆಗಳಾಗಿ ಪರಿವರ್ತಿಸಲಾಗುತ್ತದೆ. ಕನಿಷ್ಠ ಮೂರನೇ ಒಂದು ಭಾಗವನ್ನು ಸಾರ್ವಜನಿಕ ವಸತಿಗಾಗಿ ಉದ್ದೇಶಿಸಲಾಗಿದೆ.