ನವದೆಹಲಿ: ಭಾರೀ ಮಳೆಯಿಂದ ರಸ್ತೆಗಳು ಹಾನಿಗೊಳಗಾಗಿರುವ ಕಾರಣ, ಬೆಳಗಾವಿ ಮತ್ತು ಮಹಾರಾಷ್ಟ್ರದ ಮೀರಜ್ ನಡುವೆ ದೈನಂದಿನ ಪ್ರಯಾಣಿಕರಿಗೆ ಅನುಕೂಲವಾಗಲು ಬೆಳಗಾವಿ-ಮೀರಜ್ ನಡುವೆ ವಿಶೇಷ ಪ್ಯಾಸೆಂಜರ್ ರೈಲು ಓಡಾಟದ ಸೌಕರ್ಯ ಕಲ್ಪಿಸಿಕೊಡಲಾಗಿದೆ.
ಬೆಳಗಾವಿ-ಮೀರಜ್ ರೈಲು : ಪ್ರತಿದಿನ ಬೆಳಿಗ್ಗೆ ೬.೧೦ ಕ್ಕೆ ಹೊರಟು ೯.೧೦ ಕ್ಕೆ ಮೀರಜ್ ತಲುಪಲಿದೆ. ಮರಳಿ ಬೆಳಿಗ್ಗೆ ೯.೫೦ ಕ್ಕೆ ಮೀರಜ್’ನಿಂದ ಹೊರಟು ಮಧ್ಯಾಹ್ನ ೧೨.೫೦ ಕ್ಕೆ ಬೆಳಗಾವಿ ತಲುಪಲಿದೆ.
ಬೆಳಗಾವಿ-ಮೀರಜ್ ರೈಲು : ಮಧ್ಯಾಹ್ನ ೧.೩೦ ರಿಂದ ಬೆಳಗಾವಿಯಿಂದ ಹೊರಟು ಸಂಜೆ ೦೪.೩೦ ಕ್ಕೆ ಮೀರಜ್ ತಲುಪಲಿದೆ. ಮರಳಿ ಸಂಜೆ ೦೫.೩೫ ಕ್ಕೆ ಮೀರಜ್’ನಿಂದ ಹೊರಟು ರಾತ್ರಿ ೦೮.೩೫ ಕ್ಕೆ ಬೆಳಗಾವಿ ತಲುಪಲಿದೆ.
ನಾಳೆ ಜುಲೈ ೩೧ ರಿಂದ ಆಗಸ್ಟ್ ೦೪ರ ವರೆಗೆ ಬೆಳಗಾವಿ-ಮೀರಜ್ ರೈಲು ದಿನಕ್ಕೆ ೨ ಬಾರಿ ಓಡಾಟ ನಡೆಸಲಿದೆ. ಪ್ರಯಾಣಿಕರು ಈ ವಿಶೇಷ ರೈಲಿನ ಸದುಪಯೋಗ ಪಡೆಸಿಕೊಳ್ಳಬೇಕೆಂದು ಕೋರುತ್ತೇನೆ ಎಂದು ಕೇಂದ್ರರೈಲ್ವೆ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.