ಬೆಳಗಾವಿ: ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತಾಡಲು ಎದ್ದು ನಿಂತಾಗ ಅಡಳಿತ ಪಕ್ಷದ ನಾಯಕರು ಗಲಾಟೆ ಮಾಡೋದನ್ನು ನಿಲ್ಲಿಸಿದ್ದು ಆಶ್ಚರ್ಯ ಮೂಡಿಸಿತು. ಪಂಚಮಸಾಲಿ ಪ್ರತಿಭಟನೆಕಾರರ ಮೇಲೆ ನಡೆದ ಪೊಲೀಸ್ ಹಲ್ಲೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಗೃಹ ಮಂತ್ರಿಗಳಿಂದ ಸ್ಪಷ್ಟನೆ ನಿರೀಕ್ಷಿಸಿದ್ದೆವು, ಅವರ ಸ್ಪಷ್ಟನೆ ಸಮಾಧಾನಕವಾಗಿಲ್ಲ, ಪ್ರತಿಭಟನೆಕಾರರನ್ನು ಭಯೋತ್ತಾದಕರಂತೆ ಟ್ರೀಟ್ ಮಾಡಿದ್ದು ಯಾಕೆ? ಟ್ರ್ಯಾಕ್ಟರ್ ಗಳನ್ನು ತಂದು ಪ್ರತಿಭಟನೆ ನಡೆಸೋದು ತಪ್ಪಾ? ಖಾಲಿಸ್ತಾನಿಗಳ ಹಾಗೆ ತಾವೇನಾರೂ ಧ್ಚಜ ಹಾರಿಸುವ ಪ್ರಯತ್ನ ಮಾಡಿದ್ದೇವಾ ಎಂದು ಯತ್ನಾಳ್ ಪ್ರಶ್ನಿಸಿದರು.