ಕುಣಿಗಲ್: ಪ್ರತಿಭಾವಂತ ವಿದ್ಯಾರ್ಥಿಗಳಿಂದ ಸಮಾಜ ಕಟ್ಟುವಂತ ಕೆಲಸವಾಗಬೇಕಾಗಿದೆ ಎಂದು ತುಮಕೂರು ಹಿರೇಮಠಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯಸ್ವಾಮೀಜಿ ತಿಳಿಸಿದರು.ಕುಣಿಗಲ್ ವೀರಶೈವ ಲಿಂಗಾಯತ ಸೇವಾ ಸಮಾಜ, ಶ್ರೀ ಅಟವೀಶ್ವರಸ್ವಾಮೀ ಪೂಜಾ ಕೈಂಕರ್ಯ ಸೇವಾ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಅಡವೀಶ್ವರ ಸ್ವಾಮೀ ದೇವಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ ಹಾಗೂ ಅಕ್ಕಮಹಾದೇವಿ ಜಯಂತೋತ್ಸವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಧನೆ ಮಕ್ಕಳ ಮುಂದಿನ ಭವಿಷ್ಯದ ಮೆಟ್ಟಿಲು ಆಗಿದೆ ತಮ್ಮ ಇಳಿಯ ವಯಸ್ಸಿನಲ್ಲಿ ಯಾವುದೇ ಕೆಟ್ಟ ಅಭ್ಯಸಗಳಿಗೆ ಗಮನ ಕೊಡದೆ ತಮ್ಮ ಸಾಧನೆ ಕಡೆ ಹೆಚ್ಚು ಗಮನ ನೀಡಿದರೆ ಸೃಜಲ ಶೀಲಾ ವ್ಯಕ್ತಿಗಳು ಆಗಲಿದ್ದಾರೆ ಆ ಮಕ್ಕಳು ಸಮಾಜದ ಸರ್ವತೋಮುಖ ಅಭಿವೃದ್ದಿಗೆ ತಮ್ಮ ಕೊಡುಗೆ ನೀಡಲಿದ್ದಾರೆ ಎಂದರು.
ಟಿವಿ, ಸೋಷಲ್ ಮೀಡಿಯಾ ಮತ್ತು ಮೋಬೈಲ್ಗಳಲ್ಲಿ ಹಲವು ಕಾರ್ಯಕ್ರಮವನ್ನು ವೀಕ್ಷಿಸ ಬಹುದೆಂಬ ಅಲಸ್ಯ ಜನರಲ್ಲಿ ಬಂದಿದೆ, ಈ ಪ್ರವೃತ್ತಿ ಹೋಗಬೇಕು, ಎಲ್ಲರೂ ಒಂದೆಡೆ ಸೇರಿದ್ದಾಗ ತಮ್ಮ ಸುಖದುಕ್ಕಗಳನ್ನು ಹಂಚಿಕೊಂಡು ಕಾರ್ಯಕ್ರಮದಲ್ಲಿ ಹಬ್ಬದ ವಾರಾವರಣ ಸೃಷ್ಠಿಯಾಗಿ ಸಂತೋಷ, ನೆಮ್ಮದಿ ಇಲ್ಲಿ ಸಿಗಲಿದೆ, ಮೋಬೈಲ್ ಅವಶ್ಯಕತೆಗೆ ಮಾತ್ರ ಬಳಸಿಕೊಳ್ಳಬೇಕು, ಆದರೇ ಮೋಬೈಲ್ನಿಂದಲ್ಲೇ ಎಲ್ಲವನ್ನು ನೋಡಬಹುದೆಂಬುದನ್ನು ಜನರು ಬಿಡಬೇಕು ಸಂಘಟನಾತ್ಮಕವಾಗಬೇಕೆಂದು ಕರೆ ನೀಡಿದರು,
ಕುಣಿಗಲ್ ತಾಲೂಕು ತನ್ನದೆಯಾದ ಇತಿಹಾಸ, ಪರಂಪರೆ, ಘನತೆ, ಗೌರವ ಹೊಂದಿದೆ, ಕುಣಿಗಲ್ ದೊಡ್ಡಕೆರೆ, ಕುದುರೇ ಫಾರಂ, ಮಾರ್ಕೊನಹಳ್ಳಿ ಜಲಾಶಯ, ನಾಡಪ್ರಭು ಕೆಂಪೇಗೌಡ ಅವರು ಆಳ್ವಿಕೆ ಮಾಡಿದ್ದ ಹುತ್ರಿದುರ್ಗ ಬೆಟ್ಟ ಅತ್ಯಂತ ಪ್ರಸಿದ್ದವಾದ ಸ್ಥಳಗಳು ಆಗಿದೆ ಎಂದರು.ಎಡಿಯೂರು ಬಾಳೇಹೋನ್ನೂರು ಶಾಖಾ ಮಠದ ರೇಣುಕಾಶಿವಾಚಾರ್ಯಸ್ವಾಮೀಜಿ ಮಾತನಾಡಿ ವೀರಶೈವ ಲಿಂಗಾಯತ ಸೇವಾ ಸಮಾಜ, ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರವನ್ನು ಪ್ರತಿ ವರ್ಷ ಮಾಡುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು,
ನೀಡಿದರೆ ಆ ಮಕ್ಕಳಲ್ಲಿ ಓದಲು ಮತಷ್ಟು ಉತ್ಸಹ ಬರಲು ಕಾರಣವಾಗಲಿದೆ, ಹಿರಿಯರು ಮತ್ತು ಪೋಷಕರು ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಲು ಅವಶ್ಯಕ ಇರುವ ಹಲವು ಕಾರ್ಯಕ್ರಮಗಳನ್ನು ರೂಪಿಸುವುದು ಅತ್ಯ ಅವಶ್ಯಕವಾಗಿದೆ ಮಕ್ಕಳು ಈ ದೇಶದ ಸಂಪತ್ತಾಗಿದೆ, ಆ ಸಂಪತ್ತನ್ನು ನಾವುಗಳು ಸಮರ್ಪಕವಾಗಿ ಸದ್ಬಳಕ್ಕೆ ಮಾಡಿಕೊಂಡರೇ ಸಮಾಜದ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ಶ್ರೀಗಳು ಹೇಳಿದರು.
ಈ ವೇಳೆ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಾದ ಎಸ್, ಪ್ರಜ್ವಲ್, ಪೂರ್ಣಚಂದ್ರ, ಮೋಕ್ಷಕುಮಾರ್, ತನ್ಮಯ್, ಸಮರ್ಥ, ಟಿ.ಎಸ್.ಗಗನ್, ವಿಜಯಕುಮಾರ್, ಅಕ್ಷತಾಕುಮಾರಸ್ವಾಮಿ, ಪಿಹೆಚ್ಡಿ ಪಡೆದ ಕೆ.ಎಚ್.ಸಾಗರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸೇವಾ ಸಮಾಜದ ಗೌರವಾಧ್ಯಕ್ಷ ಎಸ್.ಆರ್.ಚಂದ್ರಶೇಖರ್, ಉಪಾಧ್ಯಕ್ಷ ವೈ.ವಿ.ಬಸವರಾಜು, ನಿರ್ದೇಶಕರಾದ ನಟರಾಜು, ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೇತನ್, ಸಮಾಜದ ಮುಖಂಡರಾದ ಹೆಚ್.ಎಸ್. ವಿಶ್ವನಾಥ್, ಪ್ರಸಾದ್, ಆರಾಧ್ಯ, ಗಿರಿರಾಜು, ಸೋಮಶೇಖರ್, ಕುಮಾರಸ್ವಾಮಿ, ಲೋಕೇಶ್ ಮತ್ತಿತರರು ಇದ್ದರು.