ಬೆಂಗಳೂರು: ಕರ್ನಾಟಕ ಪ್ರತಿಭಾವರ್ಧಕ ಆಕಾಡೆಮಿವತಿಯಿಂದ ನಾಡಪ್ರಭು ಕೆಂಪೇಗೌಡ ೫೧೫ನೇ ಜಯಂತಿ ಕಾರ್ಯಕ್ರಮ ಹಾಗೂ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವಿವಿಧ ಗಣ್ಯರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮನು ಬಳಿಗಾರ್ ಕಾರ್ಯಕ್ರಮ ಉದ್ಘಾಟಿಸಿ, ಗಣ್ಯರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.ಬಳಿಕ ಮಾತನಾಡಿದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ ಮಾತನಾಡಿ,ಯಾವುದೇ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳು, ಸಚಿವರು ಬರಲು ಸಮ್ಮತಿ ನೀಡಿದರೆ ಬಂದು ಹೋಗುವುದು ಅವರ ಕರ್ತವ್ಯ,
ಆದರೆ ಬರದೇ ಇದ್ದರೆ ಅವರು ತಮ್ಮ ಹುದ್ದೆಗೆ ಮಾಡುವ ಕರ್ತವ್ಯ ಲೋಪವಾಗುತ್ತದೆ,ಈ ನಾಡಿನ, ಬೆಂಗಳೂರು ನಗರದ ನಿರ್ಮಾತೃ ಮಹಾನ್ ಐತಿಹಾಸಿಕ ನಾಯಕ ಕೆಂಪೇಗೌಡರಂತಹ ಜಯಂತೋತ್ಸವ ಕಾರ್ಯಕ್ರಮಗಳಿಗೆ ಗೈರು ಹಾಜರಾದರೆ ಅವರಿಗೆ ಮಾಡುವ ಅವಮಾನ,ಇದಲ್ಲದೇ ಯಾವುದೇ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಸಚಿವರು ಗೈರಾದರೆ ಕರ್ತವ್ಯ ಲೋಪವಾಗುವುದಲ್ಲದೇ ಜನರು ಮುಂದೆ ಬುದ್ದಿ ಕಲಿಸಲಿದ್ದಾರೆ. ನನಗೂ ಕೂಡ ಒಂದು ಆಕಸ್ಮಿಕ ಸಾವಿನ ಸುದ್ಧಿ ತಿಳಿದರೂ ಕರ್ತವ್ಯದಂತೆ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ ವಿಭಾಗದ ಅಬಕಾರಿ ಆಯುಕ್ತರಾದ ಡಾ.ಬಿ.ಆರ್. ಹಿರೇಮಠ್, ಲೋಕೋಪಯೋಗಿ ಇಲಾಖೆಯ ಕಟ್ಟಡ ವಿಭಾಗದ ಮುಖ್ಯ ಇಂಜಿನಯರ್ ಶಿವಯೋಗಿ ಸ್ವಾಮಿ, ಲೋಕೋಪಯೋಗಿ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಕೃಷ್ಣಾರೆಡ್ಡಿ,ಶಾಸ್ತ್ರೀಯ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭನ್, ಸಾಹಿತಿ ಡಾ.ಕೆ.ಷರೀಪಾ,ಅಂತರಾಷ್ಟ್ರೀಯ ಕ್ರೀಡಾಪಟು ವಿ.ಜೆ.ಜಿ ಸತ್ಯಶ್ರೀ, ಪತ್ರಕರ್ತೆ ಸಂದ್ಯಾಶರ್ಮ,ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಪುಟ್ಟಸ್ವಾಮಿ ಗೌಡ. ಸಿನಿಮಾ ಕ್ಷೇತ್ರದಲ್ಲಿ ಪವಿತ್ರಾ ಹಿರೇಮಠ,ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಮತ್ತಿತರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ನೂರಕ್ಕೂ ಅಧಿಕ ಭರತ ನಾಟ್ಯ ಚಿಕ್ಕ ಕಲಾವಿದೆಯರು ಭರತ ನಾಟ್ಯ ಪ್ರದರ್ಶನ ನಡೆಸಿ ಎಲ್ಲರ ಗಮನ ಸಳೆದರು.ಕಾರ್ಯಕ್ರಮದಲ್ಲಿ ಸಂಗೀತ ನೃತ್ಯ ಆಕಾಡೆಮಿಯ ಅಧ್ಯಕ್ಷೆ ಶುಭ ಧನಂಜಯ, ಆಕಾಡೆಮಿ ಅಧ್ಯಕ್ಷ ಮು.ಗೋವಿಂದರಾಜು ಮತ್ತಿತರರು ಭಾಗವಹಿಸಿದ್ದರು.