ಮಳವಳ್ಳಿ: ಆರ್ ಆರ್ ವಧು ವರರ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಆರ್ ವೆಂಕಟರಮಣ ಪಾಪಣ್ಣನವರ ನೇತೃತ್ವದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಹಾಗೂ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭಮುಖ್ಯಮಂತ್ರಿಗಳ ವೈದ್ಯಕೀಯ ಸಲಹೆಗಾರರಾದ ಡಾ. ಎಚ್ ರವಿಕುಮಾರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರಿನ ವಡಲೂರು ಶ್ರೀ ಜ್ಯೋತಿ ರಾಮಲಿಂಗ ಸ್ವಾಮೀಜಿಗಳ ಸಮರಸ ಸನ್ಮಾರ್ಗ ಸಂಘ ಆವರಣದಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು ಹಾಗೂ ನೂರಾರು ಬಡ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ಕಿಟ್ ವಿತರಿಸಿ ಸಮಾಜದಲ್ಲಿ ಸೇವೆ ಸಲ್ಲಿಸಿದ ಮುಖಂಡರಿಗೆ ಸನ್ಮಾನಿಸಿ ಶುಭ ಕೋರಿದರು.
ವೆಂಕಟರಮಣ ಪಾಪಣ್ಣ ಮಾತನಾಡಿ ಸುಮಾರು ವರ್ಷಗಳಿಂದ ಪ್ರತಿಭಾ ಪುರಸ್ಕಾರ ವಧು ವರರ ಸಮಾವೇಶ ಹಮ್ಮಿಕೊಂಡು ಬರುತ್ತಿದ್ದೇನೆ ಈಗ ಎರಡು ಜಿಲ್ಲೆಗಳಿಗೆ ಮಾತ್ರ ಆ ಯೋಜನೆ ಮಾಡಿದ್ದು ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ವಧು-ವರ ಸಮಾವೇಶವನ್ನು ನಮ್ಮ ಜನಾಂಗದ ಆಶೀರ್ವಾದದಿಂದ ಬೆಂಗಳೂರಿನ ಕೇಂದ್ರಬಿಂದು ರವೀಂದ್ರ ಕಲಾಕ್ಷೇತ್ರದಲ್ಲಿ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರದ ವೆಂಕಟರಮಣ ಪಾಪಣ್ಣ, ಡಾ. ರವಿಕುಮಾರ್, ಸುಜಾತ ಮಯೂರಿ, ಮಡಿವಾಳ ಖಡ್ಗ ಪತ್ರಿಕೆ ಚಂದ್ರಶೇಖರ್, ಮೈಸೂರು ಡೆವೆಲಪರ್ ರವಿಕುಮಾರ್, ಪ್ರಿನ್ಸಿಪಲ್ ಶಿವಣ್ಣ, ಎಲ್ಲಪ್ಪ, ವಿಜಯನಗರ ಮಂಜುನಾಥ, ಚಾಮರಾಜಪೇಟೆ ರಂಗಸ್ವಾಮಿ ಸೇರಿದಂತೆ ಇನ್ನು ಅನೇಕ ಮುಖಂಡರು ಶಾಲಾ ಮಕ್ಕಳು ಉಪಸ್ಥಿತರಿದ್ದರು.