ಎಂ ಎನ್ ಕೋಟೆ: ಸಂಗೋಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘ ಕೇವಲ ಬ್ಯಾಂಕಿನ ವ್ಯವಹಾರಕ್ಕೆ ಅಲ್ಲದೆ ಪ್ರತಿಭಾ ಪುರಸ್ಕಾರ ಹಾಗೂ ಮಹಿಳಾ ಸಬಲೀಕರಣದತ್ತ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ಹೊಸದುರ್ಗಾ ತಾಲ್ಲೂಕಿನ ಕನಕಗುರು ಪೀಠಧ್ಯಕ್ಷರಾದ ಕಾಗಿನಲೆ ಮಠದ ಶ್ರೀ ಈಶ್ವರನಂದಪುರಿಸ್ವಾಮಿಗಳು ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಚೇಳೂರಿನಲ್ಲಿ ಹಮ್ಮಿಕೊಂಡಿದ್ದ ಸಂಗೋಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ವತಿಯಿಂದ 17ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಗೊಳಿ ರಾಯಣ ಪತ್ತಿನ ಸಹಕಾರ ಸಂಘ ಕೇವಲ ಕಡಿಮೆ ಅವಧಿಯಲ್ಲಿ ಜಿಲ್ಲಾ ಮಟ್ಟದ ಹಂತದಲ್ಲಿ ಬೆಳೆದಿದ್ದು ಕೇವಲ ಆರ್ಥಿಕ ಅಭಿವೃದ್ದಿಯ ಜತೆಗೆ ಪ್ರತಿಭಾ ಪುರಸ್ಕಾರ ಮಹಿಳಾ ಸಬಲಿಕರಣಕ್ಕಾಗಿ ಸ್ತ್ರೀ ಶಕ್ತಿ ಸಂಘಗಳಿಗೆ ಆರ್ಥಿಕ ಸಹಾಯ ಮಾಡುತ್ತಿದೆ.
ಕಾಗಿನಲೆ ಶ್ರೀಶಕ್ತಿ ಸ್ವಸಹಾಯ ಸಂಘಕ್ಕೆ ರಾಜ್ಯಮಟದಲ್ಲಿ ಶ್ರೀ ಮಠದ ವತಿಯಿಂದ ಪ್ರಥಮ ಭಾರಿಗೆ ಮಹಿಳಾ ಬ್ಯಾಂಕ್ ತೆರೆಯುವ ಚಿಂತನೆ ಪ್ರಗತಿಯಲ್ಲಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಿ ಕನಕ ಗುರು ಪೀಠಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ತಿಳಿಸಿದರು.ಇದೇ ಸಂಧರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತ್ತು.ಕಾರ್ಯಕ್ರಮದಲ್ಲಿ ತುಮಕೂರಿನ ಶ್ರೀ ರೇವಣ್ಣಸಿದ್ದೇಶ್ವರ ಮಠದ ಶ್ರೀ ಬಿಂದು ಶೇಖರ ಒಡೆಯರ್, ಸಂಘದ ಅಧ್ಯಕ್ಷ ದೊಡ್ಡಯ್ಯ, ಉಪಾಧ್ಕಕ್ಷ ನಾಗರಾಜು, ನಿವೃತ್ತ ವಲಯ ಅರಣ್ಯಧಿಕಾರಿ ರಮೇಶ್, ಕಾರ್ಯಪಾಲಕ ಇಂಜಿನಿಯರ್ ಹರೀಶ್, ನಿರ್ದೇಶಕರಾದ ದೇವರಾಜು, ಸಿದ್ದಲಿಂಗಪ್ಪ, ರಾಜು, ಮಂಜುಳ, ರುಕ್ಕಮ್ಮ, ನಂಜಯ್ಯ, ಗೋಪಾಲಯ್ಯ, ನಗಾರಾಜು ಇತರರು ಇದ್ದರು.