ದೇವನಹಳ್ಳಿ: ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿ ಜೀವಿಸುವ ಹಕ್ಕನ್ನು ಪಡೆದಿರುತ್ತಾನೆ ಅವನ ಹಕ್ಕಗಳನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಡಿ.ಕೆ. ಮಹೇಂದ್ರಕುಮಾರ್ ತಿಳಿಸಿದರು.
ಅವರು ಪಟ್ಟಣದ ತಾಲೂಕು ಪಂಚಾಯ್ತಿ ಬಳಿ ಇರುವ ಸಂಘದ ಕಛೇರಿಯಲ್ಲಿ ವಿವಿಧ ಘಟಕಗಳ ಪದಾಧಿಖಾರಿಗಳಿಗೆ ಗುರುತಿನ ಚೀಟಿ ಹಾಗೂ ಆದೇಶ ಪತ್ರ ವಿತರಿಸಿ ಮಾತನಾಡಿ ಸಮಾಜದಲ್ಲಿ ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ತಾರತಮ್ಯವಿಲ್ಲದೆ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಕಾರ್ಯಗತ ಮಾಡುವ ಉದ್ದೇಶ ಹೊಂದಿರುವ ಸಂಘವಾಗಿದ್ದು ಶಿಕ್ಷಣಕ್ಕೆ ಆದ್ಯತೆ ನೀಡಿ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿಶ್ವದಲ್ಲಿ ಮಾನವ ಬದುಕಲು ತಮ್ಮ ಹಕ್ಕನ್ನು ಚಲಾಯಿಸಲು ಯಾವುದೇ ಕೀಳರಿಮೆ,
ಭಯ ತೊರೆದು ಜೀವಿಸುವ ಹಕ್ಕಿನಬಗ್ಗೆ ಸರ್ಕಾರಗಳು ನೀಡುವ ರಕ್ಷಣೆಯಿಂದ ಬದುಕಬಹುದೆಂದು ತಿಳಿಸುವ ಉದ್ದೇಶ ಹಾಗೂ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲು ನಮ್ಮ ಮಾನವಹಕ್ಕುಗಳ ಪ್ರಚಾರ ಸಮಿತಿ ಸಹ ಭಾಗಿತ್ವವನ್ನು ಹೊಂದಿರುತ್ತದೆ,ನಮ್ಮ ಸದಸ್ಯರು ಪ್ರತ್ಯಕ್ಷ, ಪರೋಕ್ಷವಾಗಿ ಸಹಕಾರ ನೀಡುತ್ತಿರುತ್ತಾರೆ, ಅವರಿಗೆಲ್ಲಾ ನಮ್ಮ ಅಭಿನಂದಿಸಿದರು.
ನೂತನವಾಗಿ ವಿವಿಧ ಘಟಕಗಳಿಗೆ ಆಯ್ಕೆಯಾಗಿರುವ ಪದಾಧಿಕಾರಿಗಳು :
ತುಮಕೂರು ನಗರ ಅಧ್ಯಕ್ಷ ಶ್ರೀಕಾಂತ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಮತಾ, ಸಂಗಟನಾ ಕಾರ್ಯದರ್ಶಿ ಗುಣವತಿ, ಕುಣಿಗಲ್ ತಾಲೂಕು ಅಧ್ಯಕ್ಷ ಪ್ರಕಾಶ್, ದೇವನಹಳ್ಳಿ ತಾಲೂಕು ಅಧ್ಯಕ್ಷ ಎಂ. ರಾಮಕೃಷ್ಣಪ್ಪ, ಉಪಾಧ್ಯಕ್ಷರಾದ, ವಿ.ನರಸಿಂಹಮೂರ್ತಿ, ಎ. ಸೀತಾರಾಮಯ್ಯ, ಅಣ್ಣೇಶ್ವರ ವೆಂಕಟೇಶ್, ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಡಿ.ಎನ್.ಮುನಿಕೃಷ್ಣ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ರಾಜು ಅಗಸ್ತ್ಯ, ರವಿಕುಮಾರ್, ಡಿ.ಸಿ. ಶಂಕರ್ ರವರಿಗೆ ಗುರುತಿನ ಚೀಟಿ ಹಾಗೂ ಆದೇಶ ಪತ್ರ ವಿತರಿಸಲಾಯಿತು.ಸಭೆಯಲ್ಲಿ ಬೆಂ.ಗ್ರಾ.ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಆರ್.ಪುನೀತಾ, ರಾಜ್ಯ ಉಪಾಧ್ಯಕ್ಷ, ಎಂ,ಝಡ್. ಸರ್ಕಾರ್, ಇತರರು ಮಾತನಾಡಿದರು.ವಿವಿಧ ಘಟಕಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.