ಬೆಂಗಳೂರು: ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಮಾದಾವರ ಬಳಿ ಲಾರಿ ಪಾದ ಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ದಿನೇಶ್ ಪಟೇಲ್ (35)ವ್ಯಕ್ತಿ ಮೃತಪಟ್ಟಿರುತ್ತಾನೆ.
ಮತ್ತೊಂದು ಪ್ರಕರಣದ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಚೆಪಾಳ್ಯದ ಬಳಿ ಇಂದು ಮುಂಜಾನೆ ಈಚರ್ ಲಾರಿ ಫೋರ್ ನಾಟ್ ಸೆವೆನ್ ಟೆಂಪೋ ಗೆ ಡಿಕ್ಕಿ ಹೊಡೆದ ಪರಿಣಾಮ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಗಂಗಾಧರಪ್ಪ (55)ವ್ಯಕ್ತಿ ಮೃತಪಟ್ಟಿರುತ್ತಾನೆ.
ಮತ್ತೊಬ್ಬ ಪ್ರಯಾಣಿಕ ಓಬಳಪ್ಪ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ. ಈ ಇಬ್ಬರು ನಾಯಕನಹಟ್ಟಿಯಿಂದ ಆರ್ಎಂಸಿ ಯಾರ್ಡ್ಗೆ ಪದಾರ್ಥಗಳನ್ನು ತುಂಬಿಕೊಂಡು ಹೋಗುತ್ತಿರುವಾಗ ಅಪಘಾತ ಸಂಭವಿಸಿ ಮೃತಪಟ್ಟಿರುತ್ತಾನೆ ಎಂದು ನೆಲಮಂಗಲ ಸಂಚಾರಿ ಇನ್ಸ್ಪೆಕ್ಟರ್ ತಿಳಿಸಿರುತ್ತಾರೆ.