ಬೆಂಗಳೂರು: ರಾಯಚೂರು ನಿವಾಸಿಯಾದ ಬಸವರಾಜ್ (೨೭) ವ್ಯಕ್ತಿ ನಿನ್ನೆ ಮಧ್ಯರಾತ್ರಿ ಬಸ್ ಕೆಳಗಡೆ ನಿದ್ರಿಸುವಾಗ ಚಾಲಕ ಗಮನಿಸದೇ ಬಸ್ಸನ್ನು ಚಲಾಯಿಸಿದಾಗ ಬಸವರಾಜು ಮೃತಪಟ್ಟಿರುತ್ತಾನೆ.
ನಿನ್ನೆ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾರ್ಲೆಜಿ ಟೋಲ್ ಬಳಿ ಈ ಘಟನೆ ಸಂಭವಿಸಿರುತ್ತದೆ.
ಚಾಲಕ ಪರಾರಿಯಾಗಿರುತ್ತಾನೆ.
ಮತ್ತೊಂದು ಪ್ರಕರಣದಲ್ಲಿ ಬ್ಯಾಟರಾಯನ್ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನಾಯಂಡಳ್ಳಿ ಬಳಿ ಇರುವ ಕೆಎಸ್ಆರ್ಟಿಸಿ ಡಿಪೋ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿರುತ್ತಾರೆ.
ನಿನ್ನೆ ಈ ಘಟನೆ ಸಂಭವಿಸಿದಾಗ ಗಾಯಾಳು ಮಹಿಳೆ ಮಹಿಳೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಒಳಪಡಿಸುದಾಗ ಮೃತಪಟ್ಟಿರುತ್ತಾಳೆ ಎಂದು ವೈದ್ಯರು ತಿಳಿಸಿರುತ್ತಾರೆ.
ಕುತೇಜ ಬಾನು ೫೯ ವರ್ಷದ ಮಹಿಳೆ ಮೃತಪಟ್ಟಿರುವ ವ್ಯಕ್ತಿ.