ಬೆಂಗಳೂರು: ಬಿಬಿಎಂಪಿಯ ಕಸದ ಲಾರಿಯನ್ನು ಓಡಿಸುವ ಚಂದ್ರರಾಜು (37) ಎಂಬ ವ್ಯಕ್ತಿ ನಿನ್ನೆ ರಾತ್ರಿ ದ್ವಿಚಕ್ರ ವಾಹನದಲ್ಲಿ ಬಾಲಗಂಗಾಧರನಾಥ ಸ್ವಾಮಿ ಫ್ಲೈ ಓವರ್ ಮೇಲೆ ಅಪಘಾತಕ್ಕೀಡಾಗಿ ಮೃತಪಟ್ಟಿರುತ್ತಾನೆ.
ಮೈಸೂರ್ ರಸ್ತೆಯ ಪಂತರ ಪಾಳ್ಯದ ನಿವಾಸಿಯಾಗಿರುವ ಚಂದ್ರರಾಜು ಯಾವ ಕಾರಣಕ್ಕೆ ಎಲ್ಲಿಗೆ ಹೋಗುತ್ತಿದ್ದ ಎನ್ನುವುದನ್ನು ತನಿಖೆಯಿಂದ ಪತ್ತೆ ಮಾಡಲಾಗುತ್ತದೆ ಎಂದು ಮಾರ್ಕೆಟ್ ಸಂಚಾರಿ ಪೊಲೀಸರು ತಿಳಿಸಿರುತ್ತಾರೆ.ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಪಘಾತ ಹೇಗೆ ಸಂಭವಿಸಿದೆ ಎಂಬುದನ್ನು ಸಿಸಿಟಿವಿ ಮೂಲಕ ನೋಡಿ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಟಿ ಮಾರ್ಕೆಟ್ ಪೊಲೀಸ್ ಇನ್ಸ್ಪೆಕ್ಟರ್ ಸಂಚಾರಿ ತಿಳಿಸಿರುತ್ತಾರೆ.
ಮತ್ತೊಂದು ಪ್ರಕರಣದಲ್ಲಿ ಮಡಿವಾಳ ಸಂಚಾರ ಪೊಲೀಸ್ ಠಾಣ ವ್ಯಾಪ್ತಿಯ ಡಬಲ್ ಡೆಕ್ಕರ್ ಮೇಲ್ಚೇತುವೆ ಮೇಲೆ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ವಿರುದ್ಧ ದಿಕ್ಕಿನಿಂದ ದ್ವಿಚಕ್ರ ವಾಹನದ ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಎದುರುಗಡೆ ಬರುತ್ತಿದ್ದ ಎರಡು ಕ್ಯಾಬ್ ಗಳಿಗೆ ಡಿಕ್ಕಿ ಹೊಡೆದುಕೊಂಡು ಒಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಶ್ರೀನಿವಾಸ್ ರಾವ್ 27, ವರ್ಷದ ವ್ಯಕ್ತಿ ಹಿಂಬದಿ ಸವಾರ ಜೆಪಿ ನಗರದ ನಿವಾಸಿ ಮೃತಪಟ್ಟಿರುತ್ತಾನೆ ಮತ್ತು ವಿಜಯ ದೇಸಿ ರೆಡ್ಡಿ 28 ವರ್ಷ ಬಿ ಎಸ್ ಸಿ ಪದವೀಧರ ಬಿಟಿಎಂ ಲೇಔಟ್ ನ ಆಶಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ.