ಬೆಂಗಳೂರು: ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ದೇವಣ್ಣನ ಪಾಳ್ಯದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ರಸ್ತೆದಾಟುತ್ತಿರುವಾಗ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ.
ಸತ್ಯನಾರಾಯಣ (62)ವ್ಯಕ್ತಿಯು ರಸ್ತೆ ದಾಟುತ್ತಿರುವ ಸಮಯದಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರತರವಾದ ಗಾಯಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದ ಕಾರಣ ನಿನ್ನೆ ಮೃತಪಟ್ಟಿರುತ್ತಾರೆ.
ಚನ್ನರಾಯಪಟ್ಟಣ ಪೊಲೀಸ್ ಠಾಣ ವ್ಯಾಪ್ತಿಯಲ್ಲಿರುವ ಭಟ್ಟರ ಮಾರನಹಳ್ಳಿಯ ರಸ್ತೆಯಲ್ಲಿ 60 ವರ್ಷದ ವ್ಯಕ್ತಿ ರಸ್ತೆ ದಾಟುತ್ತಿದ್ದ ಸಮಯದಲ್ಲಿ ಕಾರ್ ಡಿಕ್ಕಿ ಹೊಡೆದ ಪರಿಣಾಮ ಗಾಯಾಳುವನ್ನು ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.ಅಪಘಾತ ಕೀಡಾದ ಯಲ್ಲಪ್ಪ (60)ವ್ಯಕ್ತಿಯು ಮೂಲತಃ ರೈತನಾಗಿದ್ದು ದೇವನಹಳ್ಳಿ ಇಂದ ತಮ್ಮ ತೋಟದ ಮನೆಗೆ ಹೋಗುವ ಸಂದರ್ಭದಲ್ಲಿ ಅಪಘಾಥಿಕ್ಕೀಡಾಗಿ ಮೃತಪಟ್ಟಿರುತ್ತಾರೆ.