ಬೆಂಗಳೂರು: ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಘಟನೆ ಬೆಂಗಳೂರಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಉತ್ತರ ಪ್ರದೇಶ ರಾಜ್ಯದ ಗೋರಕ್ಪುರ್ ಜಿಲ್ಲೆಯವನಾದ ಅಮರೇಶ್ ಪಾಸ್ವಾನ್ (55) ಈತನು ನಿನ್ನೆ ರಾತ್ರಿ 11:45 ಸುಮಾರಿಗೆ ನಡೆದುಕೊಂಡು ಹೋಗುವಾಗ ಮೋಟರ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರತರವಾದ ಗಾಯಸಂಭವಿಸಿ ಮೃತಪಟ್ಟಿರುತ್ತಾನೆ.
ಕಟ್ಟಡ ಒಂದರಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಇವನು ನಿನ್ನೆ ರಾತ್ರಿ ಪೇಂಟಿಂಗ್ ಕೆಲಸ ಮುಗಿಸಿ ರೂಮ್ಗೆ ಹಿಂದಿರುಗುವ ಸಮಯದಲ್ಲಿ ಬಳ್ಳಾರಿಯ ರಸ್ತೆಯ ಭುವನಹಳ್ಳಿ ಬ್ರಿಡ್ಜ್ ಬಳಿ ರಸ್ತೆ ದಾಟುವಾಗ ಅಪಘಾತಕ್ಕೀಡಾಗಿ ಮೃತಪಟ್ಟಿರುತ್ತಾನೆ.ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದ್ವಿಚಕ್ರ ವಾಹನ ಚಾಲಕನನ್ನು ಬಂಧಿಸಿರುತ್ತಾರೆ.
ಮತ್ತೊಂದು ಪ್ರಕರಣ ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಂದಗುಡಿ ಪೊಲೀಸ್ ಠಾಣೆಯ ಚೆನ್ನೆನಹಳ್ಳಿ ಬಳಿ ಅಪರಿಚಿತ ವಾಹನ ಮೋಟಾರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದರಿಂದ ರಮೇಶ್ (27) ವ್ಯಕ್ತಿ ಮೃತಪಟ್ಟಿರುತ್ತಾನೆ, ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.