ಬೆಂಗಳೂರು: ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಎರಡು ಜಾಗಗಳಲ್ಲಿ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುತ್ತಾರೆ.
ಶಾಂತಿನಗರ ಗೇಟ್ ಬಳಿ ಗೂಡ್ಸ್ ವಾಹನ ಪಾದಾಚಾರಿ ಗೆ ಡಿಕ್ಕಿ ಹೊಡೆದ ಪರಿಣಾಮ ಮಣಿ(19) ಮೃತಪಟ್ಟಿರುತ್ತಾರೆ.
ರಸ್ತೆ ದಾಟುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿರುತ್ತದೆ.ಮತ್ತೊಂದು ಘಟನೆ ಬೇಲಿ ಮಠ ಕಾಲೇಜು ಮುಂಭಾಗ ಮೋಟಾರ್ ಬೈಕ್ ಸವಾರ ಅತಿ ವೇಗವಾಗಿ ಬಂದು ಸ್ಕಿಡ್ ಆಗಿ ಬಿದ್ದು ಮೃತಪಟ್ಟಿರುತ್ತಾನೆ.ಲೋಕೇಶ್(30) ವ್ಯಕ್ತಿ ಅತಿ ವೇಗ ಅಜಾಗರುಕಥೆಯಿಂದ ಮನೆಗೆ ಹೋಗಬೇಕೆನ್ನುವ ಆತುರದಿಂದ ಕೆಲಸ ಮುಗಿಸಿ ಹೋಗುವ ಸಮಯದಲ್ಲಿ ನೆಲಕ್ಕೆ ಬಿದ್ದು ಮೃತಪಟ್ಟಿರುತ್ತಾನೆ.
ಬನ್ನೇರುಘಟ್ಟ ಪೆÇಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿಪುರ ಕ್ರಾಸ್ ಬಳಿ ಈ ಘಟನೆ ಸಂಭವಿಸಿದ್ದು, ಹರ್ಷ(13) ಎಂಬ ಯುವಕನೇ ಮೃತಪಟ್ಟ ದುರ್ದೈವಿಯಾಗಿದ್ದು, ಈತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.