ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಶಿವಮೊಗ್ಗದ ಸುಬ್ಬಯ್ಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿ ಅಪಘಾತಕೀಡಾಗಿ ಮೃತಪಟ್ಟಿರುವ ಘಟನೆ ಎಚ್ಎಸ್ಆರ್ ಲೇಔಟ್ ಸಂಚಾರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಚೈತನ್ಯ 24 ವರ್ಷದ ಯುವಕ ಮೂಲತಹ ಆಂಧ್ರಪ್ರದೇಶದ ಅನಂತಪುರದವನು, ತನ್ನ ಸ್ನೇಹಿತನನ್ನು ನೋಡುವ ಸಲುವಾಗಿ ಬೆಂಗಳೂರಿಗೆ ಬಂದು ಮೋಟರ್ ಬೈಕ್ನ್ನು ಅತಿ ವೇಗವಾಗಿ ಚಲಾಯಿಸಿ ಎಚ್ಎಸ್ಆರ್ ಲೇಔಟ್ ನ ಅಗ್ರಹಾರದಲ್ಲಿರುವ ಸಿಗ್ನಲ್ ಲೈಟ್ ಬಳಿ ಇರುವ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದುಕೊಂಡು ಮೃತಪಟ್ಟಿರುತ್ತಾನೆ.
ಮತ್ತೊಂದು ಪ್ರಕರಣದಲ್ಲಿ ಹೆಬ್ಬಾಳ ಸಂಚಾರ ಟ್ರಾಫಿಕ್ ಪೆÇಲೀಸ್ ಠಾಣ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಹತ್ತು ಮೂವತ್ತಕ್ಕೆ ದೇವಿ ನಗರ ಕ್ರಾಸ್ ಬಳಿ ಜೆಸಿಬಿ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಅಜಯ್ ಮುರಳಿ(30) ಎಂಬ ಯುವಕ ಮೃತಪಟ್ಟಿರುತ್ತಾನೆ.
ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಇವನು ಕೆಲಸ ಮುಗಿಸಿ ಜಯನಗರದ ಹೊಸೂರು ಬಳಿ ಇರುವ ಮನೆಗೆ ಹೋಗುತ್ತಿದ್ದನು.
ಮತ್ತೊಂದು ಪ್ರಕರಣದಲ್ಲಿ ವೈಟ್ಫೀಲ್ಡ್ ಸಂಚಾರಿ ಪೆÇಲೀಸ್ ಠಾಣಾ ವ್ಯಾಪ್ತಿಯ ಓ ಫಾರಂ ಸರ್ಕಲ್ ಬಳಿ ಪಾದಾಚಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ 48 ವರ್ಷದ ಬಾಬು ಎಂಬಾತ ಮೃತಪಟ್ಟಿರುತ್ತಾನೆ.