ಬೆಂಗಳೂರು: ಕಾಮಾಕ್ಷಿಪಾಳ್ಯ ಮತ್ತು ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಎರಡು ಪ್ರತ್ಯೇಕ ಅಪಘಾತಗಳಾಗಿ ವಯಸ್ಸಾದ ಇಬ್ಬರೂ ಅಜ್ಜಿಯರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಹೊರವರ್ತುಲ ರಸ್ತೆಯಲ್ಲಿರುವ ಗೈಲ್ ಗ್ಯಾಸ್ ಆಫೀಸ್ ಬಳಿ ಅಪರಿಚಿತ ವಾಹನ ಅಪರಿಚಿತ ಅಂದಾಜು65 ವರ್ಷದ ಮಹಿಳೆಗೆ ಮಧ್ಯರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಡಿಕ್ಕಿ ಹೊಡೆದಿರುವುದರಿಂದ ಆ ಮಹಿಳೆ ಮೃತಪಟ್ಟಿರುತ್ತಾರೆ ಎಂದು ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ತಿಳಿಸಿರುತ್ತಾರೆ.
ಮೃತ ಅಪರಿಚಿತ ಮಹಿಳೆಯನ್ನು ಮತ್ತು ಡಿಕ್ಕಿ ಹೊಡೆದ ವಾಹನ ಪತ್ತೆ ಮಾಡಲು ತನಿಖೆ ಕೈಗೊಂಡಿರುತ್ತಾರೆ.ಮತ್ತೊಂದು ಪ್ರಕರಣ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಬಾವಿ 9ನೇ ಬಡಾವಣೆಯಲ್ಲಿ ಇಂದು ಬೆಳಿಗ್ಗೆ 8.30 ಕ್ಕೆ ಅಂದಾಜು 65 ವರ್ಷದ ಮಹಿಳೆ ಹಾಲು ತರಲು ರಸ್ತೆ ದಾಟುವ ಸಮಯದಲ್ಲಿ ಮೋಟರ್ ಬೈಕ್ ಆಟೋ ರಿಕ್ಷಾ ಮಹಿಳೆಗೆ ಡಿಕ್ಕಿ ಹೊಡೆದಿದ್ದರಿಂದ ಮಹಿಳೆ ಮೃತಪಟ್ಟಿರುತ್ತಾರೆ.
ವಿಜಯಲಕ್ಷ್ಮಿ 65 ಮೃತ ಮಹಿಳೆ ಹಾಲು ತರಲು ಇಂದು ಬೆಳಿಗ್ಗೆ ಎಂದಿನಂತೆ ಅಂಗಡಿಗೆ ತೆರಳುವ ಸಮಯದಲ್ಲಿ ಅಪಘಾತ ಕೀಳಾಗಿ ಮೃತಪಟ್ಟಿರುತ್ತಾರೆ ಎಂದು ಜ್ಞಾನಭಾರತಿ ಸಂಚಾರಿ ಇನ್ಸ್ಪೆಕ್ಟರ್ ತಿಳಿಸಿದರು.
ಮತ್ತೊಂದು ಸಂಚಾರಿ ಅಪಘಾತ ಜೀವನ್ ಭೀಮ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗವಾರ ಪಾಳ್ಯದ, ಓಎಂ ಸರ್ವಿಸ್ ರಸ್ತೆಯಲ್ಲಿ ಕಾರ್ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾಪಯ್ಯ 68 ವರ್ಷದ ಹಿರಿಯ ನಾಗರಿಕರು ಮೃತಪಟ್ಟಿರುತ್ತಾರೆ.