ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಪೊಲೀಸರು ಹಗಲು ಮತ್ತು ರಾತ್ರಿ ಸಾರ್ವಜನಿಕರನ್ನು ಬೆದರಿಸಿ ಮೊಬೈಲ್ ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುತ್ತಾರೆ.ಜುಲೈ 13ರಂದು ಶಿವಕುಮಾರ್ ಎಂಬುವರು ಬಿಡಿಎ ರಿಂಗ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಇಬ್ಬರು ಅಪರಿಚಿತರು ಮೋಟರ್ ಸೈಕಲ್ ನಲ್ಲಿ ಬಂದು ಮೊಬೈಲ್ ದರೋಡೆ ಮಾಡಿಕೊಂಡು ಹೋಗಿದ್ದ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಶಬಾಸ್ ಖಾನ್(24), ಮುಬಾರಕ್(24) ಎಂಬ ಆರೋಪಿಗಳನ್ನು ಬಂಧಿಸಿ ಎರಡು ಕಾಲು ಲಕ್ಷ ರೂ ಬೆಲೆಬಾಳುವ 11 ಮೊಬೈಲ್ಗಳು ಮತ್ತು ಕೃತ್ಯಕ್ಕೆ ಬಳಸಲಾಗಿದ ಮೋಟರ್ ಸೈಕಲ್ ಅನ್ನು ವಶಪಡಿಸಿಕೊಂಡಿರುತ್ತಾರೆ.ಈ ಆರೋಪಿಗಳು ಅನ್ನಪೂರ್ಣೇಶ್ವರಿ ನಗರ, ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದರೋಡೆ ಮಾಡಿದ್ದರು.
ಮತ್ತೊಂದು ಪ್ರಕರಣದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುತ್ತಾರೆ.ಹರ್ಷ ಎಂಬುವವರು ನಾಗರಬಾವಿಯಲ್ಲಿ ವಾಸಿಯಾಗಿದ್ದು ಇವರ ಮನೆ ಮುಂದೆ ನಿಲ್ಲಿಸಿದ ಆಟೋ ಕಳವು ಆಗಿದ್ದೇನೆಲೆಯಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ರಿಗೆ ದೂರು ನೀಡಿದ್ದರು.
ಅಮ್ಜದ್ ಖಾನ್ 19 ವರ್ಷ ಮತ್ತು ಫೈರೋಜ್ ಪಾಷಾ (19)ಎಂಬ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಈ ಆರೋಪಿಗಳಿಂದ ಮೂರು ಆಟೋರಿಕ್ಷಾ 2 ಮೋಟರ್ ಸೈಕಲ್ ಅನ್ನು ವಶಪಡಿಸಿಕೊಂಡಿರುತ್ತಾರೆ.ಸುಮಾರು ಮೂರು ಕಾಲು ಲಕ್ಷ ಬೆಲೆಬಾಳುವ 3 ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನಗಳನ್ನು ಆರೋಪಿಗಳು ಅನ್ನಪೂರ್ಣೇಶ್ವರಿ ನಗರ, ಚಂದ್ರಾ ಲೇಔಟ್ ಮತ್ತು ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಳವು ಮಾಡಿದ್ದರು.