ಬೆಂಗಳೂರು: 3 ಪ್ರತ್ಯೇಕ ಪೋಕ್ಸೋ ಪ್ರಕರಣಗಳಲ್ಲಿ ಎಸ್ ಟಿ ಎಫ್ ಸಿ ನಾಲ್ಕು ನೇ ನ್ಯಾಯಾಲಯ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರವಸಗಿದ್ದ ಮೂರು ಆರೋಪಿಗಳಿಗೆ ಏಳು ವರ್ಷ ಕಾರಾಗೃಹ ವಾಸ ಒಂದೂವರೆ ಲಕ್ಷ ರೂಪಾಯಿ ದಂಡ, ಐದು ವರ್ಷ ಕಾರಾಗೃಹ ವಾಸ ಐವತ್ತು ಸಾವಿರ ರೂಪಾಯಿ ದಂಡ ಮತ್ತು 20 ವರ್ಷ ಕಠಿಣ ಕಾರಾಗೃಹವಾಸ ಒಂದು ಲಕ್ಷ ರೂಪಾಯಿ ದಂಡವನು ವಿಧಿಸಿ ನ್ಯಾಯಮೂರ್ತಿಗಳಾದ ಓಂಕಾರ ಮೂರ್ತಿರವರು ಆದೇಶ ಹೊರಡಿಸಿರುತ್ತಾರೆ.
ಈ ಪ್ರಕರಣಗಳು ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021, 2023 ಮತ್ತು 2023ರಲ್ಲಿ ಪೋಕ್ಸೋ ಪ್ರಕರಣಗಳು ದಾಖಲಾಗಿತ್ತು.ಈ ಪ್ರಕರಣಗಳಿಗೆ ಸಂಬಂಧಪಟ್ಟಹಾಗೆ ಗೋರ್ಲಾ ಲೋವ ರಾಜು ಎಂಬ ಆರೋಪಿಯನ್ನು ಬಾಲಕಿಯು ಆರೋಪಿಯ ಮೊಬೈಲ್ ಅಂಗಡಿಗೆ ಮೊಬೈಲ್ ರೀಚಾರ್ಜ್ ಮಾಡಿಸಲು ಬಂದ ಸಮಯದಲ್ಲಿ ಸಂತ್ರಸ್ತೆ ಮೇಲೆ ಲೈಂಗಿಕ ಸಂಪರ್ಕವನ್ನು ಎಸಗಿದ್ದ ಎಂಬ ಅಂಶವನ್ನು ಅಂದಿನ ಚಿಕ್ಕಜಾಲ ಪೊಲೀಸ್ ಠಾಣೆಯ ದೇವನಹಳ್ಳಿ ವಿಭಾಗದ ಎಸಿಪಿ ಬಾಲಕೃಷ್ಣರವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕೆ ಅಂತಿಮ ವರದಿ ಸಲ್ಲಿಸಿದರು.
ಮತ್ತೊಂದು ಪ್ರಕರಣದಲ್ಲಿ ರಾಮಕೃಷ್ಣ ರೆಡ್ಡಿ ಪೊಲೀಸ್ ಇನ್ಸ್ಪೆಕ್ಟರ್ ರವರು 2023ರಲ್ಲಿ ಚಿಕ್ಕಜಾಲ ಪೊಲೀಸ್ ಠಾಣೆಯ ಬೆಟ್ಟ ಹಲಸೂರಿನಲ್ಲಿ ಅಪ್ರಾಪ್ತ ಬಾಲಕಿಗೆ ಈಜು ಕಲಿಸುವ ನೆಪದಲ್ಲಿ ಸಂತ್ರಸ್ತೆಯು ಬಟ್ಟೆ ಬಿಚ್ಚುವ ರೂಮ್ನಲ್ಲಿ ಮರ್ಮಾಂಗಕ್ಕೆ ಕೈ ಹಾಕಿ ಕಿರುಕುಳವೆಸಕ್ಕಿದ್ದನು ಎಂದು ಆರೋಪ ಪಟ್ಟಿ ಸಲ್ಲಿಸಿದರು.ಈ ಸಂಬಂಧ ಮಾನಸ ಎಂಬ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದರು.
ನ್ಯಾಯಮೂರ್ತಿ ಓಂಕಾರ ಮೂರ್ತಿರವರು, ಎಸ್ ಟಿ ಎಫ್ ಸಿ 4ನೆ ನ್ಯಾಯಾಲಯ ಇದನ್ನೆಲ್ಲಾ ಪರಿಶೀಲಿಸಿ ಆರೋಪಿ ಮಾನಸಾಗಿ ಐದು ವರ್ಷ ಶಿಕ್ಷೆ ಮತ್ತು ಐವತ್ತು ಸಾವಿರ ರೂಪಾಯಿ ದಂಡ ವಿಧಿಸಿದೆ.
2021 ರಲ್ಲಿ ಮಾರನಾಯಕನಹಳ್ಳಿ ಕಾಲೋನಿಯ ಅಜ್ಜಿಯ ಮನೆಯಲ್ಲಿ ಬಾಲಕಿ ಆಟವಾಡುವ ಸಮಯದಲ್ಲಿ ಚಾಕಲೇಟ್ ಕೊಡಿಸುವ ನೆಪದಲ್ಲಿ ಆಸೆ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದ ಮೇರೆಗೆ ರುದ್ರೇಶ್ ಎಂಬ ಆರೋಪಿಯನ್ನು ಪ್ರವೀಣ ಪೊಲೀಸ್ ಇನ್ಸ್ಪೆಕ್ಟರ್ ರವರು ಬಂಧಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದರು.ಎಸ್ ಟಿ ಎಫ್ ಸಿ ನಾಲ್ಕನೇ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಓಂಕಾರ ಮೂರ್ತಿರವರು ಆರೋಪಿ ರುದ್ರೇಶ್ಗೆ ಇಪ್ಪತ್ತು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿರುತ್ತಾರೆ.