ಬೆಂಗಳೂರು: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಮತ್ತು ಸೂರ್ಯ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿನ್ನೆ ಎರಡು ಪ್ರತ್ಯೇಕ ಕೊಲೆ ಯಾಗಿರುವ ಘಟನೆ ವರದಿಯಾಗಿದೆ.ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೇರಳೆಗಟ್ಟದಲ್ಲಿ ಲಕ್ಷ್ಮಣ(60) ಎಂಬಾತ ತನ್ನ ಹೆಂಡತಿ ರಾಧಮ್ಮ (50)ನನ್ನು ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾನೆ.
ಕೌಟುಂಬಿಕ ಕಲಹದಿಂದ ಈ ಕೊಲೆ ನಡೆದಿದ್ದು ಆರೋಪಿ ಲಕ್ಷ್ಮಣ ಗಾರೆ ಕೆಲಸ ಮಾಡುತ್ತಿದ್ದು, ನೇರಳೆ ಗಟ್ಟದ ಗ್ರಾಮಸ್ಥರು ಹಾಗೂ ಇತರರು ಕೊಲೆ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾಗ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿ ಲಕ್ಷ್ಮಣನನ್ನು ವಶಕ್ಕೆ ಪಡೆದು ಕೊಲೆ ಮೊಕದ್ದೊಮ್ಮೆ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿರುತ್ತಾರೆ.
ಸೂರ್ಯ ಸಿಟಿ ಪೊಲೀಸ್ ಠಾಣ ವ್ಯಾಪ್ತಿಯ ಮುತ್ತಾನಲ್ಲೂರು ಬಳಿ ನಿನ್ನೆ ಅಂದಾಜು 35 ವರ್ಷದ ಗಂಡಸನ್ನು ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾರೆ. ಸೂರ್ಯ ನಗರ ಪೊಲೀಸರು ಕೊಲೆ ಮೊಕದ್ದಮೆ ದಾಖ ಲು ಮಾಡಿಕೊಂಡು ಅಪರಿಚಿತ ಕೊಲೆಯಾದ ವ್ಯಕ್ತಿ ಯನ್ನು ಪತ್ತೆ ಮಾಡಲು ಹಾಗೂ ಆರೋಪಿಗಳನ್ನು ಪತ್ತೆ ಮಾಡಲು ತಂಡ ರಚಿಸಿರುತ್ತಾರೆ.