ಬೆಂಗಳೂರು: ಗ್ಯಾಸ್ ಸಿಲಿಂಡರ್ ನಿಂದ ಗ್ಯಾಸ್ ಲೀಕ್ ಆಗಿ ಬೆಂಕಿ ಕಡ್ಡಿ ಗಿರಿದಾಗ ಗ್ಯಾಸ್ ಗೆ ಬೆಂಕಿ ತಗುಲಿ ರಾಶಿ ೨೫ ವರ್ಷದ ಯುವಕನಿಗೆ ತೀವ್ರತರವಾದ ಸುಟ್ಟ ಗಾಯ ಸಂಭವಿಸಿದ್ದರಿAದ ಹತ್ತಿರದ ಅಂಬೇಡ್ಕರ್ ಆಸ್ಪತ್ರೆಗೆ ಚಿಕಿತ್ಸೆ ಗೆಂದು ದಾಖಲು ಮಾಡಿ ನಂತರ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿರುವ ಘಟನೆ ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡಿ ನಗರದಲ್ಲಿ ಜರುಗಿದೆ.
ಮತ್ತೊಂದು ಪ್ರಕರಣದಲ್ಲಿ ಕದರಪ್ಪ ೫೨ ವರ್ಷದ ವ್ಯಕ್ತಿಯು ದಿನ್ನೂರ್ ರಸ್ತೆಯಲ್ಲಿ ಮರದ ಕೊಂಬೆಯನ್ನು ಕಟ್ಟು ಮಾಡುವ ಸಮಯದಲ್ಲಿ ಆಯಾ ತಪ್ಪಿ ನೆಲಕ್ಕೆ ಬಿದ್ದು ಮೃತಪಟ್ಟಿರುತ್ತಾನೆ.
ಈ ಎರಡು ಪ್ರತ್ಯೇಕ ಪ್ರಕರಣಗಳು ನಿನ್ನೆ ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.