ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲು ವಸತಿ ಹಾಗೂ ಮದ್ಯಪೂರೈಕೆ ಮತ್ತು ಊಟದ ವ್ಯವಸ್ಥೆ ಸಲುವಾಗಿ ಪ್ರವಾಸೋದ್ಯಮ ಇಲಾಖೆ ಮತ್ತು ಅಬಕಾರಿ ಇಲಾಖೆಯಿಂದ ಅನುಮತಿ ಪಡೆದ ಸುಮಾರು 2000 ಕ್ಕಿಂತ ಹೆಚ್ಚು ಹೋಟೆಲುಗಳು ಈಗ ಹಲವು ಸಂಕಷ್ಟಗಳನ್ನು ಎದರಿಸುತ್ತಿದೆ.
ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಮತ್ತು ಅಬಕಾರಿ ಸಚಿವರಾದ ಶ್ರೀ ಆರ್.ವಿ. ತಿಮ್ಮಾಪುರ ಇವರನ್ನು ಸಂಘದ ವತಿಯಿಂದ ಭೇಟಿಯಾಗಿ ಹೋಟೆಲುಗಳು ಎದುರಿಸುತ್ತಿರುವ (ಸಿ.ಎಲ್-7) ಸನ್ನದುದಾರರು, ವಾರ್ಷಿಕ ಲೈಸೆನ್ಸ್ ಶುಲ್ಕವನ್ನು ಕಡಿಮೆ ಮಾಡಿ, ಅಬಕಾರಿ ಲಾಭಾಂಶವನ್ನು 10 ರಿಂದ 20% ಒದಗಿಸಿಕೊಡಬೇಕೆಂದು ಮತ್ತು ರಾಜ್ಯದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಶೈಕ್ಷಣಿಕ ಪ್ರವಾಸಕ್ಕೆ, ನೈಸರ್ಗಿಕ ಪ್ರವಾಸಕ್ಕೆ ಹೋಗುವ ಪ್ರವಾಸಿಗರಿಗೆ ನಿರಂತರವಾಗಿ 24 ಗಂಟೆಗಳ ಕಾಲ ಮದ್ಯ ಪೂರೈಕೆ ಮತ್ತು ಊಟದ ವ್ಯವಸ್ಥೆಗೆ ಅವಕಾಶ ಮಾಡಿಕೊಡಬೇಕೆಂದು ಸೇರಿದಂತೆ ಮನವಿಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ರೇವಣಸಿದ್ದಪ್ಪ ಅವರು ಮಾಡಿಕೊಂಡರು.
ಮತ್ತು ಇದೇ ತಿಂಗಳು 20 ರಂದು ವೈನ್ ಮರ್ಚಂಟ್ ಅಸೋಸಿಯೇಷನ್ ಅವರು ಲಿಕ್ಕರ್ ಮಾರಾಟ ಬಂದ್ ಕರೆಕೊಟ್ಟಿದ್ದು ಅದಕ್ಕೆ ನಮ್ಮ ವಿರೋಧವಿದೆ, ದಿ:20-11-2024 ರಂದು ಎಲ್ಲರೂ ಲಿಕ್ಕರ್ ಮಾರಾಟ ಮಾಡುತ್ತೇವೆ ಎಂದು ರೇವಣಸಿದ್ದಪ್ಪ ಸ್ಪಷ್ಟಪಡಿಸಿದ್ದಾರೆ.