ಬೆಂಗಳೂರು: ವ್ಯಕ್ತಿಯ ದಕ್ಷತೆ ಪ್ರಶಸ್ತಿಗಳ ಕಡೆಗೆ ಕೊಂಡುಯ್ಯುತ್ತವೆ. ಪ್ರಶಸ್ತಿಗಳು ಸಾಧಕರ ಸ್ವತ್ತಾಗಿರುತ್ತವೆ. ಪ್ರಶಸ್ತಿಗಳು ಲಭಿಸುವುದರಿಂದ ವ್ಯಕ್ತಿಯ ಜವಾಬ್ದಾರಿ ಹೆಚ್ಚಿಸುತ್ತವೆ ಎಂದು ಹಿರಿಯ ಜಾನಪದ ಗಾಯಕ ಗುರುರಾಜ ಹೊಸಕೋಟೆ ಹೇಳಿದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ 2024-25ನೇ ಸಾಲಿನ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಯನ್ನು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ರ. ನರಸಿಂಹಮೂರ್ತಿ ಅವರಿಗೆ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಸ್ನೇಹ ಬಳಗದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.
ಪ್ರಶಸ್ತಿಗಳು ನಮ್ಮ ಸಾರ್ಥಕ ಕೆಲಸದಿಂದ ಹುಡಿಕಿಕೊಂಡು ಬರಬೇಕು. ನಾವು ಪ್ರಶಸ್ತಿ ಬೆನ್ನತ್ತಿ ಹೋಗಬಾರದು, ಇಂದಿನ ಸನ್ಮಾನಿತರಾದ ನರಸಿಂಹಮೂರ್ತಿ ರವರ ನಿಷ್ಕಳಂಕ ಸೇವೆಗೆ ಪ್ರಶಸ್ತಿ ಬೆನ್ನತ್ತಿ ಬಂದಿರುವದು ಸಂತಸ ತಂದಿದೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ರ. ನರಸಿಂಹಮೂರ್ತಿ, ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಯನ್ನು ನನ್ನ ಸೇವಾ ಕಾರ್ಯಗಳನ್ನು ಮೆಚ್ಚಿ ನನಗೆ ಪ್ರಶಸ್ತಿ ಬರಲು ಕಾರಣರಾದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ ಜಾನಪದ ಎಸ್ ಬಾಲಾಜಿ ರವರಿಗೆ ಹೃತ್ಪೂರ್ವಕ ಧನ್ಯವಾದಗಳು ಮತ್ತು ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಕಳೆದ ಇಪ್ಪತ್ತೈದಕ್ಕೂ ಹೆಚ್ಚಿನ ವರ್ಷಗಳಿಂದ ನಿರಂತರವಾಗಿ ಕನ್ನಡ ನಾಡು. ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಹತ್ತು ಹಲವು ಸಮಾಜಮುಖಿ ಕೆಲಸಗಳನ್ನು ಇನ್ನೂ ಜಾಗರುಕತೆಯಿಂದ ನಿರ್ವಹಿಸುವಂತೆ ಮಾಡಿದೆ ಎಂದರು.
ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪುರಸ್ಕೃತರಾಗಿರುವ ನರಸಿಂಹಮೂರ್ತಿ ಅವ ರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಆಯೋಜಿಸಿರುವುದು ಸ್ವಾಗತಾರ್ಹವಾಗಿದೆ. ಇದರಿಂದ ಪ್ರಶಸ್ತಿ ಪಡೆದ ಇವರಿಗೆ ವೃತ್ತಿಯಲ್ಲಿ ಮತ್ತಷ್ಟು ಉತ್ತೇಜನ ನೀಡಿ ಮುಂದಿನ ದಿನಗಳಲ್ಲಿ ಅವರಿಗೆ ಇನ್ನಷ್ಟು ಹೆಚ್ಚಿನ ಜವಾಬ್ದಾರಿ ಹೊತ್ತು ಸಾಗಬೇಕಿದೆ ಎಂದು ಸಂತವಾಣಿ ಸುಧಾಕರ್ ತಿಳಿಸಿದರು.
ಸಮಾರಂಭದಲ್ಲಿ ವಿಜಯ್ ಫೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ್, ಪತ್ರಕರ್ತರಾದ ರಾಮಚಂದ್ರ, ಐಎನ್ ಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಕೆಪಿಸಿಸಿ ಅಸಂಘಟಿತ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ಗುತ್ತಿಗೆದಾರರು ಹಾಗೂ ಕಾಂಗ್ರೆಸ್ ಮುಖಂಡರಾದ ಕೆ ವಿ ಸಂದೀಪ್, ಪ್ರಾಧ್ಯಾಪಕ ಸಂದೇಶ್, ವಕೀಲ ನಂಜಪ್ಪ, ಮುಖಂಡರಾದ ಶಿವಮೂರ್ತಿ, ಜಯಕರ್ನಾಟಕ ಮಂಜುನಾಥ್, ಪರಿಸರ ವೇಣುಗೋಪಾಲ್, ಶ್ರೀಮತಿ ಸವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ತಿನ ಪದಾಧಿಕಾರಿಗಳು, ಅನೇಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮುಖಂಡರು, ಮಹಿಳಾ ಮುಖಂಡರು, ಕಾರ್ಯಕರ್ತರು, ಸ್ನೇಹಿತರು, ಶ್ರೀ ವೀರಭದ್ರಸ್ವಾಮಿ ಶಾಲಾ ಮಕ್ಕಳು ಸ್ಥಳೀಯ ನಾಗರಿಕರು ಆಗಮಿಸಿ ನರಸಿಂಹಮೂರ್ತಿ ಅವರಿಗೆ ಶುಭಕೋರಿದರು. ಶಿವಶಂಕರ್ ಕಾರ್ಯಕ್ರಮ ನಿರೂಪಿಸಿದರು, ಡಿ ಸಿ ಯತೀಶ್ ಸ್ವಾಗತಿಸಿದರು.