ಬೆಂಗಳೂರು: ತನ್ನ ಮಗನ ಸೇವೆ ಮಾಡಲಿಲ್ಲ ಎಂದು ಶಾಲಾ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿನಿಯನ್ನು ಬೆತ್ತದಿಂದ ಥಳಿಸಿರುವ ಘಟನೆ ದೇವನಹಳ್ಳೀ ತಾಲೂಕಿನ ವಿಯಪುರದ ಶಾಲೆಯೊಂದರದಲ್ಲಿ ನಡದಿದೆ.
ಉಷಾಕಿರಣ್ ಎಂಬ ಪ್ರಾಂಶುಪಾಲೆ ೫ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಥಳಿಸಿದ್ದು, ಇದರಿಂದ ಆಕ್ರೋಶಗೊಂಡ ಪೋಷಕರು ಶಾಲೆ ಬಳಿ ಬಂದು ಪ್ರಾಂಶುಪಾಲೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಂಶುಪಾಲೆ ತನ್ನ ತಪ್ಪಿನ ಅರಿವಾಗಿ ವಿದ್ಯಾರ್ಥಿನಿಯ ಕೈ Uಕಾಲಿಗೆ ಥಳಿಸಿದ್ದಾಗಿ ತಿಳಿಸಿದ್ದು, ಕೆಲವೊಮ್ಮೆ ವಿದ್ಯಾರ್ಥಿಗಳ ಸಹಾಯ ಬೇಕಾಗುತ್ತದೆ. ತನ್ನ ಮಗ ವಿಶೇಷ ಚೇತನನಾಗಿದ್ದಾನೆ ಎಂದು ತಿಳಿಸಿದ್ದಾರೆ.