ತುಮಕೂರು: ಪರಸ್ಪರ ಪ್ರೀತಿಸುತ್ತಿದ್ದವರ ಮದುವೆಗೆ ಯುವತಿಯ ಪೋಷಕರು ನಿರಾಕರಿಸಿದ ಹಿನ್ನೆಲೆಯಲ್ಲಿ ನೊಂದ ಯುವಕ ಯುವತಿಯ ಮನೆ ಎದುರೇ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆ ಚನ್ನಪ್ಪನ ಪಾಳ್ಯದಲ್ಲಿ ನಡೆದಿದೆ.
ಮಂಜುನಾಥ್ ಎಂಬ ಯುವಕ ಟಿಟಿ ಚಾಲಕನಾಗಿದ್ದು, ತಾನು ಪಕ್ಕದ ಮನೆಯ ಯುವತಿ ಯೊಂದಿಗೆ ವಿವಾಹವಾಗಲು ನಿಶ್ಚಯಿಸಿದ್ದ. ಇದಕ್ಕೆ ಯುವತಿಯೂ ಸಹ ಸಮ್ಮತಿ ಸೂಚಿಸಿದ್ದಳು ಎನ್ನಲಾಗಿದೆ. ಯುವತಿ ಪೋಷಕರು ಇವರಿಬ್ಬರ ಮದುವೆಗೆ ನಿರಾಕರಿಸಿದ ಹಿನ್ನೆಲೆ ಯುವಕ ಯುವತಿಯ ಮನೆಯ ಎದುರೇ ನೇಣುಹಾಕಿ ಕೊಂಡು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.