ಬೆಂಗಳೂರು: ಪ್ರೀತಿ ಮಾಡುತ್ತಿದ್ದ ಮಗಳನ್ನು ಕಾಲೇಜು ಬಿಡಿಸಿದ್ದಕ್ಕೆ ಮನನೊಂದು ಮೋಹನ ಕುಮಾರಿ(19) ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ತಾಲೂಕಿನ ಕಾಚೋಹಳ್ಳಿಯಲ್ಲಿ ನಡೆದಿದೆ.
ಪಾಪೇಗೌಡ ಮತ್ತು ಮಂಜುಳ ದಂಪತಿ ಪುತ್ರಿ ಮೋಹನ್ ಕುಮಾರಿ ತಮ್ಮದೇ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಿದ್ದೇಶ್ನನ್ನು ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದಳು.ವಿಷಯ ತಿಳಿಯುತ್ತಿದ್ದಂತೆ ಪೋಷಕರು ಯುವತಿಯನ್ನು ಕಾಲೇಜ್ ಬಿಡಿಸಿ ಚಿಕ್ಕಮ್ಮ ಪ್ರಮೀಳಾ ಮನೆಯಲ್ಲಿರಿಸಿದ್ದರು.
ಈ ವಿಷಯವಾಗಿ ಮನನೊಂದ ಯುವತಿ ಮನೆಯ ರೂಂನ ಫ್ಯಾನ್ಗೆ ವೇಲ್ ಬಳಸಿ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.