ಬೆಂಗಳೂರು: ನಿನ್ನೆ ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಆವರಣದಲ್ಲಿ ಭವ್ಯ ಕಾರ್ಯಕ್ರಮದಲ್ಲಿ ಪ್ರೊ. ಅ.ರಾ.ಮಿತ್ರರ ಕುರಿತು ಅವರ ತ್ಮೀಯರು, ಶಿಷ್ಯರು ಆಭಿಮಾನಿಗಳು ಬರೆದ ಶ್ರೀ ಅಣಕು ರಾಮನಾಥ್ರವರು ಮತ್ತು ಪ್ರೊ. ಮಿತ್ರರ ಪುತ್ರಿ ಸೌಮ್ಯ ಮಿತ್ರರವರು ಮಿತ್ರಸಂಪಾದಿಸಿದ ತೇಜು ಪಬ್ಲಿಕೇಷನ್ರವರು ಮುದರಿಸಿದ “ಮಿತ್ರಾವರಣ ಕಾರ್ಯಕ್ರಮವಿತ್ತು. ಅವರ 90ನೇ ಜನುಮದಿನದ ಸಂದರ್ಭದಲ್ಲಿ ಅವರ ಪರಿವಾರದವರು ಹಾಗೂ ಆತ್ಮೀಯರು ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮವನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಆರಂಭಿಸಿ ವಿದುಷಿ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಗಾಯನದೊಂದಿಗೆ ಆರಂಭವಾಯಿತು. ಕಾರ್ಯಕ್ರದಲ್ಲಿ ಅನೇಕ ಗಣ್ಯ ಮಾನ್ಯ ವ್ಯಕ್ತಿಗಳು ಊಪಸ್ಥಿತರಿದ್ದರು.
ಉದ್ಘಾಟನೆಯನ್ನು ವೇದಿಕೆಯ ಮೇಲಿದ್ದ ಗಣ್ಯರು ನೆರವೇರಿಸಿದರು, ಅಭಿನಂದನಾಗ್ರಂಥ ಬಿಡುಗಡೆಯನ್ನು ಶತಾವಧಾನಿ ಆರ್ ಗಣೇಶ್, ರಮಣಶ್ರೀ ಸಮೂಹ ಗುಂಪುಗಳ
ಮಾಲೀಕರಾದ ಶ್ರೀ ಷಡಕ್ಷರಿ, ಡಾ|| ಟಿ ವಿ ವೆಂಕಟಾಚಲ ಶಾಸ್ತ್ರಿಗಳು,ಡಾ|| ಚಂದ್ರ ಶೇಖರ ಕಂಬಾರ, ಡಾ|| ಸಿ ಸೋಮಶೇಖರ್ , ಹಾಸ್ಯಸಾಹಿತಿ ಲೇಖಕ ಡಾ|| ಎಂ ಕೃಷ್ಣೇಗೌಡರು ನೆರವೇರಿಸಿದರು.ಉದ್ಘಾಟನಾ ಭಾಷಣ ಮಾಡಿದ ಡಾ. ಚಂದ್ರಶೇಖರ ಕಂಬಾರರು ತಮ್ಮ ಮತ್ತು ಪ್ರೊ.. ಅ.ರಾ. ಮಿತ್ರರ ಒಡನಾಟವನ್ನು ನೆನಪಿಸಿಕೊಂಡರು. ಅವರ ಅಭಿನಂದನಾ ಗ್ರಂಥಕ್ಕೆ ಅಭಿನಂದಿಸಿ ಜನುಮದಿನಕ್ಕೆ ಶುಭಕೋರಿದರು. ಗ್ರಂಥ ಬಿಡುಗಡೆ ಮಾಡಿದ ಡಾ|| ಟಿ.ವಿ ವೆಂಕಟಾಚಲ ಶಾಸ್ತ್ರಿಗಳು ಪ್ರೊ.. ಅ.ರಾ ಮಿತ್ರರ ಕುರಿತು ಅವರ ಸೊಗಸಾಗಿ ಮಾತನಾಡಿ ಅವರ ಗುಣ ವಿಶೇಷಗಳ ಕುರಿತು ಸುಂದರವಾದ ಪದ್ಯವನ್ನು ವಾಚಿಸಿ ಶುಭ ಹಾರೈಸಿದರು.
ಅಭಿನಂದನಾ ಗ್ರಂಥದಲ್ಲಿ ಒಟ್ಟು ಲೇಖನಗಳಿದ್ದು ಅನೇಕ ಪ್ರಸಿದ್ಧವ್ಯಕ್ತಿಗಳು ಪ್ರೊ. ಅ.ರಾ.ಮಿತ್ರರವರ ಬದುಕು ಬರಹಗಳ ಜೊತೆಗೆ ಅವರೊಂದಿಗೆ ಒಡನಾಟವನ್ನು ಸ್ಮರಿಸಿದ್ದಾರೆ. ನಾಡೋಜ ಎಸ್ ಆರ್ ರಾಮಸ್ವಾಮಿ, ಡಾ|| ಟಿವಿ ವೆಂಕಟಾಚಲ ಶಾಸ್ತ್ರಿಗಳು, ಡಾ|| ಎಚ್ ಎಸ್ ವೆಂಕಟೇಶ ಮೂರ್ತಿ, ಡಾ. ಎ.ವಿ ಪ್ರಸನ್ನ, ಬಸವರಾಜ ಕಲ್ಗುಡಿ, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ನಾಡೋಜ ಹಂಪನಾ, ರಿಚಾರ್ಡ್ ಲೂಯಿಸ್, ಎಂ ಎಸ್ ನರಸಿಂಹಮೂರ್ತಿ, ಭುವನೇಶ್ವರಿ ಹೆಗಡೆ, ಎಚ್ ಡುಂಡಿರಾಜ್, ಪ್ರೊ.. ಎಂ ಕೃಷ್ಣೇಗೌಡರು, ಸುಚೇಂದ್ರ ಪ್ರಸಾದ್ ಇವರಲ್ಲದೇ ಅನೇಕ ವಿದೇಶಿ ಮಿತ್ರರು ನಟರು ಅನೇಕ ಸಾಹಿತಿಗಳು ಸೇರಿ ಒಟ್ಟು 84 ಲೇಖನಗಳನ್ನು ಒಳಗೊಂಡಿದೆ.
ಶತಾವಧಾನಿ ಆರ್ ಗಣೇಶರವರು ಪ್ರೊ.. ಅ,ರಾ.ಮಿತ್ರರ ಛಂದೋಮಿತ್ರ ಮತ್ತು ಮೇಘದೂತ ಕೃತಿಗಳ ಬಗೆಗೆ ಮಾತನಾಡುತ್ತಾ ಮಿತ್ರರು ಹೇಗೆ ಕನ್ನಡದಲ್ಲಿ ಬಳಕೆಯಾಗುವ ಎಲ್ಲ ಛಂದಸ್ಸುಗಳ ಪರಿಚಯವನ್ನು ಉದಾಹರಣೆಗಳ ಸಮೇತ ಮಾಡಿಕೊಟ್ಟಿದ್ದಾರೆ ಎಂಬುದನ್ನು ಹೇಳಿದರು. ಮಿತ್ರರ ಕೃತಿಗಳಲ್ಲಿ ಹಾಸ್ಯದ ಜೊತೆಗೆ ಸಾಮಾಜಿಕ ಕಳಕಳಿ, ಪ್ರಸ್ತುತ ಸಮಾಜದ ವಿಮರ್ಶೆಗಳು ಕೂಡ ಸೊಗಸಾಗಿ ಮೂಡಿ ಬಂದಿರುತ್ತದೆ. ಇವರ ರಚನೆಗಳಲ್ಲಿ ಶ್ಲೇಷವನ್ನು ಶ್ಲೇಷಾರ್ಥಗಳನ್ನು ಬಹಳ ಸೊಗಸಾಗಿ ಬಳಸುತ್ತಾರೆ. ಹಾಸ್ಯವೆಂದರೆ ಅಶ್ಲೀಲತೆ ಎಂಬ ಭಾವನೆ ಬರುವ ಈ ಕಾಲದಲ್ಲಿ ಅಶ್ಲೀಲತೆ ಹಾಗೂ ಕ್ಲಿಷ್ಟತೆಯನ್ನು ಬಿಟ್ಟು ಸರಳವಾಗಿ ಮನಕ್ಕೆ ಆನಂದ ನೀಡುವ ಉತ್ತಮ ಸಾಹಿತ್ಯದ ರಚನೆ ಮಾಡಿದ್ದಾರೆ ಎಂದರು.
ಮೇಘದೂತ ಕೃತಿಯ ಬಗೆಗೆ ಮಾತನಾಡುತ್ತಾ ಮೂಲ ಕೃತಿಯ ಆಶಯಕ್ಕೆ ಧಕ್ಕೆ ಬರದಂತೆ ಅನುವಾದ ಮಾಡಿರುವ ಪ್ರೊ.. ಅ.ರಾ ಮಿತ್ರರು ಕನ್ನಡದಲ್ಲಿ ಬಂದ ಅತ್ಯುತ್ತಮ ಅನುವಾದ ಇಲ್ಲಿ ಅವರ ಕಾವ್ಯ ಕೌಶಲವನ್ನು ಗುರುತಿಸಬಹುದು. ಕನ್ನಡ ಸಾರಸ್ವತ ಲೋಕ ಪ್ರೊ.. ಅ.ರಾ.ಮಿತ್ರರ ವಿದ್ವತ್ತನ್ನು ವ್ಯಾಪಕತೆಯನ್ನು ಗುರುತಿಸುವಲ್ಲಿ ತಡಮಾಡಿತೋನೋ ಅವರನ್ನು ಹಾಸ್ಯ ಲೇಖನಗಳಿಗೆ ಗುರುತಿಸುವಷ್ಟು ಅವರ ವಿದ್ವತ್ ಪೂರ್ಣ ರಚನೆಗಳನ್ನು ಗುರುತಿಸಿಲ್ಲ ಎಂದರು.
ಡಾ. ಸೂರ್ಯ ಪ್ರಕಾಶ ಪಂಡಿತರು ಮಾತನಾಡಿ ಪ್ರೊ.. ಮಿತ್ರರ ಕುಮಾರ ವ್ಯಾಸ ಕಥಾಮಿತ್ರ ಕೃತಿಯಲ್ಲಿ ಬರುವ ಮಹಾಭಾರತದ ಸಂಗತಿಗಳು ಮತ್ತು ಪಾತ್ರಗಳ ಬಗೆಗೆ ಮಾತನಾಡಿದರು. ಮತ್ತು ಈ ಕೃತಿಯೊಂದಿಗಿನ ತಮ್ಮ ಸಂಬಂಧವನ್ನು ಹೇಳಿದರು.ಡಾ. ಸಿ ಸೋಮಶೇಖರ್ರವರು “ವಚನಕಾರರು ಮತ್ತು ಶಬ್ದಕಲ್ಪ”ಕೃತಿಯ ಬಗೆಗೆ ಮಾತನಾಡುತ್ತಾ ಪ್ರೊ.. ಮಿತ್ರರ ಅಭಿನಂದನಾ ಗ್ರಂಥ ಕಾರ್ಯಕ್ರಮವು ಹಾಸ್ಯಮಯವಾಗಿರಬಹುದೆಂದು ಕೊಂಡಿದ್ದೆಇಂತಹ ಗಂಭೀರ ವಿಚಾರಗಳು ಮತ್ತು ಅವರ ಕೃತಿಗಳ ಕುರಿತು ಬೆಳಕು ಚೆಲ್ಲುವ ಕಾರ್ಯ ಬಹಳ ಉತ್ತಮವಾಗಿದೆ ಎಂದು ಹೇಳಿದರು.ಡಾ. ಅರ್ಚನಾರವರು ಪ್ರೊ.. ಮಿತ್ರರ ರಾಮಾಯಣ ಮಿತ್ರ ಕೃತಿಯ ಪರಿಚಯವನ್ನು ಮಾಡಿದರು.
ಹಾಸ್ಯ ಬರಹಗಾರ ವೈ.ವಿ ಗುಂಡೂರಾವ್ರವರು ಟಿ.ಪಿ ಕೈಲಾ ಕುರಿತು ಮತ್ತು ಶ್ರೀ ಎಂ ಎಸ್ ನರಸಿಂಹಸ್ವಾಮಿಯವರು ಲಲಿತಪ್ರಬಂಧಗಳು ಹಾಗೂ ಪ್ರೇಮನದಿಯ ದಡದಲ್ಲಿ ಕೃತಿಗಳ ಬಗೆಗೆ ಸೊಗಸಾಗಿ ಮಾತನಾಡಿದರು. ಕಲಾಗಂಗೋತ್ರಿ ತಂಡದ ಸದಸ್ಯರಿಂದ ಪ್ರೊ..ಮಿತ್ರರ ಕಥೆಗಳನ್ನು ಆಧರಿಸಿದ ಸ್ಕಿಟ್, ಗೀತ ನೃತ್ಯ ಮೊದಲಾದ ಅನೇಕ ಕಾರ್ಯಕ್ರಮಗಳು ನಡೆದವು.