ಚಿಕ್ಕಬಳ್ಳಾಪುರ: ನಗರದ ಪ್ರಮುಖ ಬಿಬಿ ರಸ್ತೆಯಲ್ಲಿ ಉಪಾಹಾರ, ಕಬಾಬ್ ಹಾಗೂ ಇತರೆ ಬೀದಿ ಬದಿ ವ್ಯಾಪಾರಸ್ಥರು ಪುಟ್ ಪಾತ್ತನ್ನು ಬಿಡದೆ ಎಲ್ಲಿಂದರಲ್ಲಿ ಅಂಗಡಿ ಜೋಡಿಸಿ ವ್ಯಾಪಾರ ಮಾಡುತ್ತಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗಿರುವ ಬಗ್ಗೆ ಜನಸಾಮಾನ್ಯರಿಂದ ವ್ಯಾಪಕ ದೂರುಗಳು ಬಂದಿದ್ದು, ನಗರಸಭೆ ಅಧ್ಯಕ್ಷ ಗಜೇಂದ್ರ ಉಪಾಧ್ಯಕ್ಷ ನಾಗರಾಜ್.ಜೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಒಳಗೊಂಡಂತೆ ಇಂದು ನಗರಸಭೆ ಸಭಾಂಗಣದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಭೆ ಏರ್ಪಡಿಸಲಾಗಿತ್ತು.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಗರಸಭೆ ಪೌರಾಯುಕ್ತರು ಬೀದಿ ಬದಿಯ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ನಗರಸಭೆ ಅಧ್ಯಕ್ಷ ಗಜೇಂದ್ರ ಮಾತನಾಡಿ ಫುಟ್ ಪಾಥ್ ಜಾಗದಲ್ಲಿ ಅಂಗಡಿ ಜೋಡಿಸುವುದರಿಂದ ನಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು ಹಾಗೂ ಉಪಾಹಾರ ಸವಿಯಲು ಬರುವವರು ಎಲ್ಲಿಂದರಲ್ಲಿ ವಾಹನ ನಿಲ್ಲಿಸುವುದರಿಂದ ಬಹಳಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದು, ಬೀದಿ ಬದಿಯ ವ್ಯಾಪಾರಿಗಳಿಗೆ ಒಂದಿಷ್ಟು ಸೂಚನೆಗಳನ್ನ ನೀಡಲಾಗಿದೆ.
ಪ್ರಮುಖವಾಗಿ ಗುಣಮಟ್ಟ ಆಹಾರ,ಪ್ಲಾಸ್ಟಿಕ್ ಬಳಕೆ ಮಾಡಬಾರದು,ನೈರ್ಮಲ್ಯ ಕಾಪಾಡಲು ಸಲಹೆ ಸೂಚನೆಗಳು ನೀಡಿದ್ದೇವೆ ಇನ್ನು ಪರವಾನಗಿ ಪಡೆಯಲು ಕೊಡ ಸೂಚಿಸಿದ್ದು ಅಂಗಡಿಗಳನ್ನು ಇಡುವ ಸಮಯದ ಬಗ್ಗೆ ಕೂಡ ಸೂಚಿಸಲಾಗಿದೆ,ಪ್ರಮುಖವಾಗಿ ಆಹಾರ ಸೇವಿಸಲು ಬರುವವರೆಗೆ ವಾಹನ ನಿಲ್ಲಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಗಾಡಿ ಮುಂದೆಯೇ ವಾಹನ ನಿಲ್ಲಿಸಲು ಬಿಡಬಾರದು. ಇಂದು ನೀಡಿರುವ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸಬೇಕು ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆ ಉಪಾಧ್ಯಕ್ಷ ನಾಗರಾಜ್.ಜೆ ಮಾತನಾಡಿ ಫುಟ್ ಪಾಥ್ ವ್ಯಾಪಾರಸ್ಥರ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಇಂದು ವ್ಯಾಪಾರಸ್ಥರ ಜೊತೆ ಸಭೆ ನಡೆಸಿದ್ದು ಫುಟ್ ಪಾಥ್ ವ್ಯಾಪಾರಸ್ಥರು ವ್ಯಾಪಾರದ ವೇಳೆ ಏನೆಲ್ಲ ಪಾಲಿಸಬೇಕು ಎಲ್ಲವನ್ನೂ ಸೂಚನೆ ನೀಡಿದ್ದು ಅದನ್ನ ಪಾಲಿಸಬೇಕು, ಇನ್ನು ಚಿಕ್ಕಬಳ್ಳಾಪುರ ಪ್ರವಾಸಿ ತಾಣಯಾಗಿದೆ ನಗರಕ್ಕೆ ಜನರ ಆಗಮನ ಹೆಚ್ಚಾಗಿದೆ ಟ್ರಾಫಿಕ್ ಕೂಡ ಜ್ಯಾಸ್ತಿಯಾಗಿದೆ ಬಿಬಿ ರಸ್ತೆಯಲ್ಲಿ ಅಧಿಕವಾಗಿ ವಾಹನ ಸಂಚಾರ ಇದ್ದು ಬೀದಿ ಬದಿ ವ್ಯಾಪಾರಸ್ಥರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಬಾರದು. ಈಗಾಗಲೇ ವ್ಯಾಪಾರಸ್ಥರ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿವೆ ಹಾಗಾಗಿ ಕ್ರಮ ಕೈಗೊಳ್ಳುವ ಮುಂಚಿತವಾಗಿ ಅವರಿಗೆ ಕಲವು ಸೂಚನೆಗಳನ್ನ ನೀಡಲು ಇಂದು ನಗರಸಭೆ ಅಧ್ಯಕ್ಷರು ಸಭೆ ಕರೆದ್ದಿದ್ದು ಬೀದಿ ಬದಿ ವ್ಯಾಪಾರಿಗಳಿಗೆ ಅನುಸರಿಸಬೇಕಾದಂತಹ ವಿಧಾನಗಳನ್ನು ತಿಳಿಸಲಾಗಿದೆ.
ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಇನ್ನು ಆರೋಗ್ಯಕ್ಕೆ ಹಾನಿ ಉಂಟುಮಾಡುವ ಪದಾರ್ಥಗಳನ್ನು ಬಳಕೆ ಮಾಡಬಾರದು ಜನರ ಆರೋಗ್ಯದ ಬಗ್ಗೆ ಚೆಲ್ಲಾಟ ಮಾಡದಿರಿ ಚಿಕ್ಕಬಳ್ಳಾಪುರ ಘನತೆ ಗೌರವ ಉಳಿಸಿ ಹೊರಗಿನಿಂದ ಬರುವ ಜನರಿಗೆ ಉತ್ತಮ ಗುಣಮಟ್ಟದ ಆಹಾರ ನೀಡಿ ಎಂದು ಸಲಹೆ ನೀಡಿದರು.
ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು ಫುಟ್ ಪಾಥ್ ಪಾದಚಾರಿಗಳಿಗೆ ತಂದರೂ ಆಗದಂತೆ ನೋಡಿಕೊಳ್ಳಬೇಕು ಗಾಡಿ ಮುಂದೆಯೇ ವಾಹನ ನಿಲುಗಡೆಗೆ ಅವಕಾಶ ನೀಡಬಾರದು ವಾಹನ ನಿಲ್ಲಿಸದರೆ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತೆ ಈ ಸಮಯದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಕಾರಣ ಯಾರು ಹಾಗಾಗಿ ಗ್ರಾಹಕರ ವಾಹನಗಳ ನಿಲುಗಡೆಗೆ ವ್ಯವಸ್ಥೆ ನೀವೇ ಮಾಡಿಕೊಳ್ಳಬೇಕು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದೆ ನಿಮ್ಮ ವ್ಯಾಪಾರ ವಹಿವಾಟು ನಡೆಸಿಕೂಳ್ಳಬೇಕೆಂದರು.
ಪಿಎಸ್ಐ ಅಮರ್ ಮಾತನಾಡಿ ಬಿಬಿ ರಸ್ತೆಯಲ್ಲಿನ ಬೀದಿ ಬದಿ ವ್ಯಾಪಾರಸ್ಥರು ರಸ್ತೆಯ ಎರಡು ಬದಿ ಅಂಗಡಿ ಇಟ್ಟುಕೊಂಡಿದ್ದು ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಗಿದೆ ಇನ್ನು ನಿಮ್ಮ ಬಳಿ ಬರುವವರೆಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಿ ಎಲ್ಲೆಂದರಲ್ಲಿ ಅಲ್ಲಿ ವಾಹನ ನಿಲ್ಲಿಸುತ್ತಿರುವ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದು ನಾವು ನೀಡಿರುವ ಸೂಚನೆಗಳನ್ನು ಪಾಲಿಸಿ ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಇನ್ನು ನಿಗದಿತ ಸಮಯದಲ್ಲಿ ವ್ಯಾಪಾರ ವಹಿವಾಟು ಮುಗಿಸಬೇಕು ಬಳಿಕ ಅವಕಾಶ ಇರುವುದಿಲ್ಲ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿ ಜಿಲ್ಲಾ ವ್ಯವಸ್ಥಾಪಕರು ವೆಂಕಟ ಚಲಪತಿ, ಟ್ರಾಫಿಕ್ ಪೆÇಲೀಸ್ ಎ ಎಸ್ ಐ ನಾಗರಾಜ್, ಆಹಾರ ನಿರೀಕ್ಷಕರಾದ ಹರೀಶ್, ಪರಿಸರ ಅಭಿಯಂತರ ಉಮಾಶಂಕರ್ ಮತ್ತು ಇತರರು ಉಪಸ್ಥಿತರಿದ್ದರು.