ನವದೆಹಲಿ: ಮೇ 31 ಮತ್ತು ಜೂನ್ 4 ರಂದು ತಾಷ್ಕೆಂಟ್ನಲ್ಲಿ ನಡೆಯಲಿರುವ ಉಜ್ಬೇಕಿಸ್ತಾನ ವಿರುದ್ಧದ ಎರಡು ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯಗಳಿಗೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಸೋಮವಾರ 23 ಆಟಗಾರ್ತಿಯರ ಮಹಿಳಾ ತಂಡವನ್ನು ಪ್ರಕಟಿಸಿದೆ.
30 ಸಂಭಾವ್ಯ ಆಟಗಾರರೊಂದಿಗೆ ತಂಡವು ಹೈದರಾಬಾದ್ನ ಶ್ರೀನಿಧಿ ಡೆಕ್ಕನ್ ಎಫ್ಸಿಯ ತವರು ಮೈದಾನದಲ್ಲಿ ಎರಡು ವಾರಗಳ ಕಾಲ ತರಬೇತಿ ಪಡೆಯಿತು.ನಂತರ ಮುಖ್ಯ ಕೋಚ್ ಲಂಗಮ್ ಚಾವೊಬಾ ದೇವಿ ತಂಡದ ಆಟಗಾರರ ಸಂಖ್ಯೆಯನ್ನು 23ಕ್ಕೆ ಇಳಿಸಿದರು. ಭಾರತ ತಂಡ ಬುಧವಾರ ತಾಷ್ಕೆಂಟ್ಗೆ ಪ್ರಯಾಣ ಬೆಳೆಸಲಿದೆ.
ವರ್ಷದ ಆರಂಭದಲ್ಲಿ, ಎಸ್ಟೋನಿಯಾ ಮತ್ತು ಹಾಂಗ್ಕಾಂಗ್ ಒಳಗೊಂಡ ಚತುಷ್ಕೋನ ಟೂರ್ನಿಯಲ್ಲಿ ಭಾರತವು ಕೊಸೊವೊ ನಂತರ ಟರ್ಕಿಷ್ ಮಹಿಳಾ ಕಪ್ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿತ್ತು.ಭಾರತ ಮಹಿಳಾ ತಂಡ: ಗೋಲ್ ಕೀಪರ್ಸ್: ಶ್ರೇಯಾ ಹೂಡಾ, ಮೈಬಾಮ್ ಲಿಂಟೊಯಿಂಗಂಬಿ ದೇವಿ, ಮೊಯಿರಾಂಗ್ಥೆಮ್ ಮೊನಾಲಿಶಾ ದೇವಿ. ಡಿಫೆಂಡರ್ಸ್: ಲೈಟಾಂಗ್ಬಾಮ್ ಆಶಾಲತಾ ದೇವಿ, ಸಂಜು, ಹೇಮನ್ ಶಿಲ್ಕಿ ದೇವಿ, ಜೂಲಿ ಕಿಶನ್, ಅಷ್ಟಮ್ ಒರಾನ್, ಅರುಣಾ ಬಾಗ್,
ಸೊರೊಖೈಬಾಮ್ ರಂಜನಾ ಚಾನು, ವಾಂಗ್ಖೆಮ್ ಲಿಂಟೊಯಿಂಗಾಂಬಿ ದೇವಿ. ಮಿಡ್ ಫೀಲ್ಡರ್ಸ್: ಕಾರ್ತಿಕಾ ಅಂಗಮುತ್, ಕಾವಿಯಾ, ನರೇಮ್ ಪ್ರಿಯಾಂಕಾ ದೇವಿ, ನೇಹಾ, ಸಂಧ್ಯಾ ರಂಗನಾಥನ್, ಸಂಗೀತಾ ಬಾಸ್ಫೋರ್, ಸೌಮ್ಯ ಗುಗುಲೋತ್, ಅಂಜು ತಮಾಂಗ್. ಫಾರ್ವರ್ಡ್ಸ್: ಕಾಜೋಲ್ ಡಿಸೋಜಾ, ಕರಿಷ್ಮಾ ಶಿರ್ವೋಕರ್, ಪ್ಯಾರಿ ಕ್ಸಾಕ್ಸಾ, ಸೆರ್ಟೊ ಲಿಂಡಾ ಕೋಮ್.