ಬೆಂಗಳೂರು: ಶ್ರೀ ಬನಶಂಕರಿ ದೇವಿ ಸನ್ನಿದಾನದಲ್ಲಿ ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ಆಶ್ರಯದಲ್ಲಿ 26ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಬರುವ ವರ್ಷದ ಫೆಬ್ರವರಿ 23ರಂದು ನಡೆಯಲಿದೆ ಎಂದು ವ್ಯವಸ್ಥಾಪಕ, ಮಾಜಿ ಪಾಲಿಕೆ ಸದಸ್ಯ ಎ.ಎಚ್.ಬಸವರಾಜು ತಿಳಿಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಇಚ್ಚೆಯುಳ್ಳ ಎಲ್ಲ ಸಮುದಾಯದ ಬಡ ಬಂದುಗಳು ವದು ವರರು ಫೆಬ್ರವರಿ 15ರೊಳಗೆ ತಮ್ಮ ಹೆಸರನ್ನು ನೊಂದಾಯಿಸತಕ್ಕದು,ಬೆಂಗಳೂರು ನಗರ, ಗ್ರಾಮಾಂತರ ರಾಜ್ಯದ ವಿವಿಧ ಪ್ರದೇಶದ ವದು ವರರು ನೋಂದಾಯಿಸಿ ಕೊಳ್ಳಬಹುದಾಗಿದೆ, ಬಾಗವಹಿಸುವವರಿಗೆ ಹಿಂದೂ ಸಂಪ್ರದಾಯದಂತೆ ಸಮವಸ್ತ್ರವನ್ನು, ಕಂಕಣದಾರ, ಹೂವಿನ ಹಾರ, ಮಾಂಗಲ್ಯ, ಕಾಲುಂಗರ,ಪೇಟ, ವದು ವರರಿಗೆ ಊಟೋಪಾಚರದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಪ್ರತಿಪಕ್ಷ ನಾಯಕರಾದ ಆರ್.ಅಶೋಕ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶರವಣ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜೆ.ಆರ್.ದಾಮೋದರ ನಾಯ್ಡು, ಹೆಚ್.ಕೆ.ಮುತ್ತಪ್ಪ, ಆರ್.ನಾರಾಯಣಸ್ವಾಮಿ, ಸಿ.ಮುತ್ತಪ್ಪ ಮತ್ತಿತರರು ಉಪಸ್ಥಿತರಿದ್ದರು.