ನೆಲಮಂಗಲ: ರಾಜ್ಯದಲ್ಲಿ ಹೊರ ರಾಜ್ಯದವರ ಹಾವಳಿ ಹೆಚ್ಚಾಗಿದ್ದು ಇದೀಗ ಬೆಂಗಳೂರು ಮಾತ್ರವಲ್ಲದೆ ಗ್ರಾಮಾಂತರ ಮಟ್ಟದಲ್ಲೂ ಉತ್ತರ ಭಾರತೀಯರ ದಬ್ಬಾಳಿಕೆ ಮಿತಿಮೀರಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನೆಲಮಂಗಲ ತಾಲ್ಲೂಕು ಅಧ್ಯಕ್ಷ ಮಂಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರವೇ ನೆಲಮಂಗಲ ತಾಲ್ಲೂಕು ಘಟಕ ಕರೆದಿದ್ದ ಮಹಾಸಂಘರ್ಷ ಯಾತ್ರೆ ಪೂರ್ವ ಭಾವಿ ಸಭೆಯಲ್ಲಿ ಬಾಗವಹಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬರುತ್ತಿರುವವರ ಜನಸಂಖ್ಯೆ ಹೆಚ್ಚಾ ಗುತ್ತಿದ್ದು ಎಲ್ಲ ಕಂಪನಿಗಳಲ್ಲೂ ಹೊರರಾಜ್ಯದವರೇ ಉದ್ಯೋಗವನ್ನು ಆವರಿಸಿಕೊಳ್ಳುತ್ತಿದ್ದಾರೆ ಬೀದಿ ಗಲ್ಲಿ ಗಲ್ಲಿಯಲ್ಲೂ ಹೊರ ರಾಜ್ಯದವರೇ ನೆಲೆಸಿದ್ದು ಒಂದು ಕಡೆ ಕನ್ನಡಿಗರ ಮಕ್ಕಳ ಉದ್ಯೋಗವನ್ನು ಕಿತ್ತುಕೊಳ್ಳುತ್ತಿದ್ದಾರೆ ಇನ್ನೊಂದು ಕಡೆ ಹಳ್ಳಿಗಳಲ್ಲೂ ಕೂಡ ಎಕ್ಕರೆ ಗಟ್ಟಲೆ ಜಮೀನನ್ನು ಖರೀದಿಸುತ್ತಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕವನ್ನೇ ಹೊರ ರಾಜ್ಯದವರು ಬಂದು ಆಳುವ ಪರಿಸ್ಥಿತಿ ಬರಲಿದೆ ಎಂದರು.
ಸರಕಾರ ಎಚ್ಚರವಹಿಸಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಕೊಡಬೇಕಾಗಿದೆ. ಈಗಾಗಲೇ ಎಲ್ಲಕಡೆ ಕಾರ್ಖಾನೆಗಳಲ್ಲಿ ಹೊರರಾಜ್ಯ ದವರೇ ಗುತ್ತಿಗೆ ಪಡೆದ್ದಿದು ಇದರಿಂದ ಕನ್ನಡಿಗರ ಮಕ್ಕಳಿಗೆ ಕೆಲಸ ಸಿಗದೇ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿ ಬೀದಿ ಬೀದಿ ಅಲೆಯುವಂತ ಪರಿಸ್ಥಿತಿ ಬಂದಿದೆ. ಕನ್ನಡ ನೆಲದಲ್ಲಿ ಕನ್ನಡಿಗನೇ ಸರ್ವಭೌಮ ಕನ್ನಡ ನಾಮಫಲಕಕ್ಕಾಗಿ ಹೋರಾಟ ಮಾಡಿದಂತೆ ಕನ್ನಡಿಗರಿಗೆ ಹಕ್ಕುಗಳಿಗಾಗಿ ಉದ್ಯೋಗಕಾಗಿ ಸಮರಸ ಘೋಷಣೆ ಮಹಾ ಸಂಘರ್ಷ ಯಾತ್ರೆಯನ್ನು ಫೆಬ್ರವರಿ 1ರಂದು ಬೆಂಗಳೂರಿನ ಸ್ವತಂತ್ರ ಉದ್ಯಾವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಪುರುಷೋತಮ್ ಮಾತನಾಡಿ ಹೊರ ರಾಜ್ಯದಿಂದ ಅಲ್ಪ ಸಂಖ್ಯಾವಾಗಿ ಬಂದವರು ಬಹು ಸಂಖ್ಯಾವಾಗಿ ಕರ್ನಾಟಕವನ್ನು ಹವರಿಸಿ ಕನ್ನಡದವರ ಮೇಲೆ ದಿನನಿತ್ಯ ದಬ್ಬಾಳಿಕೆ ದೌರ್ಜನ್ಯ ಮಾಡುತ್ತಿದ್ದಾರೆ. ಇದರಿಂದ ಕನ್ನಡಿಗರಿಗೆ ಸ್ವಂತ ನೆಲದಲ್ಲೇ ನೆಲೆ ಇಲ್ಲದಂತಾಗುತ್ತಿದೆ ನಮ್ಮ ನೆಲದಲ್ಲಿಯೇ ನಮಗೆ ನೆಲೆ ಇಲ್ಲವಾದರೆ ಮತ್ತೆಲ್ಲಿಗೆ ಹೋಗಿ ಬದುಕು ಕಟ್ಟಿ ಕೊಳ್ಳಬೇಕು ನಾವು ಸಹಿಸಿದ್ದು ಸಾಕು, ಈ ದೌರ್ಜನ್ಯದ ವಿರುದ್ಧ ಸಿಡಿದೇಳುವ ಸಮಯ ಬಂದಾಗಿದೆ ಕನ್ನಡಿಗರೇ ಎದ್ದೇಳಿ ಉತ್ತರ ಭಾರತದಿಂದ ಬೆಂಗಳೂರಿಗೆ ಬಂದು ನೆಲೆಸಿರುವವರು ಈಗ ನಗರಗಳಿಂದ ಹೋಬಳಿ ಮಟ್ಟಕ್ಕೆ ನುಗ್ಗಿ ನಮ್ಮ ಅನ್ನ ಕಸಿದುಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಫೆಬ್ರವರಿ 1ರಂದು ಬೆಂಗಳೂರಿನಲ್ಲಿ ನಡೆಯುವ ಮಹಾ ಸಂಘರ್ಷ ಯಾತ್ರೆಗೆ ಕೈ ಜೋಡಿಸಿ ಎಂದರು.
ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷ ಜಯಣ್ಣ, ತಾಲ್ಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ.ಬಿ ಆರ್, ಸಂಘಟನಾ ಕಾರ್ಯದರ್ಶಿಗಳಾದ ಮಂಜುನಾಥ್, ಸೋಂಪುರ ಹೋಬಳಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಲೋಕೇಶ್, ಸಂಘಟನೆ ಕಾರ್ಯದರ್ಶಿ ಮರಿಯಪ್ಪ ಸೇರಿದಂತೆ ಹಲವರು ಭಾಗಿಯಾಗಿದರು.