ಬೆಳಗಾವಿ : ಇಂದಿನಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದ್ದು ಎಲ್ಲೆಡೆ ಅಧಿವೇಶನಕ್ಕೆ ಬರುವ ನಾಯಕರನ್ನು ಸ್ವಾಗತಿಸುವ ಫ್ಲೆಕ್ಸ್, ಬಾನರ್ ಕಂಡು ಬರುತ್ತಿಲ್ಲವಾದರೂ ಕೆಲವೆಡೆ ಮಾತ್ರ ಕಾಣ ಸಿಗುತ್ತಿವೆ.
ಬೆಳಗಾವಿಯ ಬಸ್ ನಿಲ್ದಾದಿಂದ ಸುವರ್ಣ ಸೌಧಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿವರೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ ಸೇರಿದಂತೆ ಹಲವು ನಾಯಕರಿಗೆ ಸ್ವಾಗತ ಕೋರುವ ಫ್ಲೆಕ್ಸ್ ಹೇರಳವಾಗಿ ಅಳವಡಿಸಲಾಗಿದೆ,
ಬೆಳಗಾವಿ ರೈಲ್ ನಿಲ್ದಾದಿಂದ ಮಾರ್ಕೆಟ್ ಸ್ಟೇಷನ್ವರೆಗೆ ಪೊಲಿಸ್ ಬೆಳಗ್ಗೆಯೇ ಕಾರ್ಯ ನಿರತರಾಗಿದ್ದರು ಬಂದು ಹೋಗುವ ವಾಹನಗಳ ತಪಾಸಣೆ ನಡೆಸುತ್ತಿದ್ದದ್ದು ಕಂಡು ಬಂತು.
ಇನ್ನು ಸುವರ್ಣಸೌಧಕ್ಕೆ ಪ್ರವೇಶ ಪಡೆಯುವ ವಾಹನಗಳನ್ನು ಎರಡು ಹಂತದಲ್ಲಿ ಕಟ್ಟುನಿಟ್ಟಾಗಿ ಪರಿಶೀಲಿಸುತ್ತಿದ್ದ ಪರಿಣಾಮ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂತು, ಸುವರ್ಣ ಸೌಧದಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದರಿಂದ ಸಾಲು ಸಾಲು ವಾಹನ ಅರ್ಧ ಗಂಟೆ ಕಾಲ ಪಾರ್ಕಿಂಗ್ ಮಾಡಲು ಸಾಹಸ ಪಡಬೇಕಾಯಿತು. ಮುಖ್ಯ ಮಂತ್ರಿ ವಾಹನ ಹೊರತು ಪಡಿಸಿ ಸಚಿವ ಶಾಸಕರು, ಅಧಿಕಾರಿಗಳು ಸೇರಿದಂತೆ ಎಲ್ಲ ರೀತಿಯ ಇಲಾಖೆ ಅವರ ವಾಹನಗಳ ನಿಲುಗಡೆಗೆ ಸಾಕಷ್ಟು ಪ್ರಯಾಸ ಪಡುವಂತಾಯಿತು.