ಬೆಂಗಳೂರು: ಖಾದ್ಯ ತೈಲಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಬಂಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಜನಪ್ರಿಯ ನಟಿ ಕೀರ್ತಿ ಸುರೇಶ್ ಅವರನ್ನು ಫಿಯೋನಾ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಬ್ರಾಂಡ್ ರಾಯಭಾರಿಯಾಗಿ ಘೋಷಿಸಿದೆ. ತನ್ನ ಅದ್ಭುತ ಅಭಿನಯ ಮತ್ತು ದಕ್ಷಿಣ ಭಾರತದಾದ್ಯಂತ ಆಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಕೀರ್ತಿ, ಭಾರತೀಯರಿಗೆ ಗುಣಮಟ್ಟ, ಪೋಷಣೆ ಮತ್ತು ರುಚಿಗಳನ್ನು ಸಂಯೋಜಿಸಿ ವಿಶ್ವಾಸಾರ್ಹ ಅಡುಗೆ ಎಣ್ಣೆಯನ್ನು ಒದಗಿಸುವ ಫಿಯೋನಾ ಅವರ ಅಭಿಯಾನಕ್ಕೆ ಸೂಕ್ತ ಪ್ರತಿನಿಧಿಯಾಗುತ್ತಾರೆ. ಫಿಯೋನಾ ಅಡುಗೆಗೆ ಉತ್ತಮ ಆಯ್ಕೆಯಾಗಿದೆ.
ಸುಧಾರಿತ ವಿಟೊಪ್ರೊಟೆಕ್ಟ್ ಸೂತ್ರವಿರುವ ಫಿಯೋನಾ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಶ್ರೇಷ್ಠವಾಗಿದೆ. ಸಾಮಾನ್ಯ ಸೂರ್ಯಕಾಂತಿ ಎಣ್ಣೆಗಳಿಗೆ ಹೋಲಿಸಿದರೆ ಆಹಾರಕ್ಕೆ 50%* ಹೆಚ್ಚು ವಿಟಮಿನ್ ಗಳನ್ನು ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಭಕ್ಷ್ಯಗಳ ಒಟ್ಟಾರೆ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಲು ಈ ಸೂತ್ರೀಕರಣವನ್ನು ನಿಖರವಾಗಿ ಅಭಿವೃದ್ಧಿಪಡಿಸಲಾಗಿದೆ. ದೈನಂದಿನ ಊಟ ರುಚಿಕರವಾಗಿ ಮಾತ್ರವಲ್ಲದೆ ಆರೋಗ್ಯಕರವಾಗಿಯೂ ಇರುವಂತೆ ಮಾಡುತ್ತದೆ.
ಫಿಯೋನಾ ಪರಿವಾರಕ್ಕೆ ಸೇರುತ್ತಿರುವ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ ನಟಿ ಕೀರ್ತಿ ಸುರೇಶ್, “ಉತ್ತಮ ಜೀವನಶೈಲಿ ಆಯ್ಕೆಗಳನ್ನು ನೀಡುವ ವಿಶ್ವಾಸಾರ್ಹ ಬ್ರಾಂಡ್ ಫಿಯೋನಾ ರಿಫೈನ್ಡ್ ಸನ್ಫ್ಲವರ್ ಆಯಿಲ್ ಅನ್ನು ಪ್ರತಿನಿಧಿಸಲು ನನಗೆ ರೋಮಾಂಚನವಾಗುತ್ತಿದೆ. ಫಿಯೋನಾದ ವಿಟೊ ಪ್ರೊಟೆಕ್ಟ್ ಫಾರ್ಮುಲಾ, ಪೌಷ್ಟಿಕಾಂಶ ಮತ್ತು ರುಚಿ ಎರಡನ್ನೂ ಖಾತ್ರಿಗೊಳಿಸುತ್ತದೆ. ಇದು ದೈನಂದಿನ ಅಡುಗೆಗೆ ಉತ್ತಮ ಆಯ್ಕೆಯಾಗಿದೆ. ಫಿಯೋನಾ ಜೊತೆ ಈ ಪ್ರಯಾಣವನ್ನು ಆರಂಭಿಸಲು ಉತ್ಸುಕಳಾಗಿದ್ದೇನೆ”
ಹಕ್ಕು ನಿರಾಕರಣೆ:*”ನಿಯಂತ್ರಿತ ಪರೀಕ್ಷಾ ಪರಿಸ್ಥಿತಿಗಳಲ್ಲಿ ಎಫ್.ಎಸ್.ಎಸ್.ಎ.ಐ ಮಾನ್ಯತೆ ಪಡೆದ ಲ್ಯಾಬ್ (ಸೆಪ್ಟೆಂಬರ್ 2019) ನಲ್ಲಿ ನಡೆಸಿದ ಸ್ವತಂತ್ರ ಅಧ್ಯಯನದ ಆಧಾರದ ಮೇಲೆ.”ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಭಾರತೀಯರ ಐಸಿಎಂಆರ್ ಪೌಷ್ಟಿಕಾಂಶದ ಅಗತ್ಯತೆಗಳು 2020 ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಮತೋಲಿತ ಆಹಾರ ಮತ್ತು ನಿಯಮಿತ ದೈಹಿಕ ಚಟುವಟಿಕೆಯನ್ನು ಫಿಯೋನಾ ಶಿಫಾರಸು ಮಾಡುತ್ತದೆ.
*ವಿಟಮಿನ್ಗಳು – ವಿಟಮಿನ್ ಎ, ಡಿ ಮತ್ತು ನೈಸರ್ಗಿಕ ವಿಟಮಿನ್ ಇ.