ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಕಾಣಿಸಿಕೊಂಡು ಬಣಗಳ ಗುದ್ದಾಟಕ್ಕೆ ಪರಿಹಾರ ಕಂಡುಹಿಡಿಯಲು ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.
ನಿನ್ನೆ ಮಧ್ಯಾಹ್ನದಿಂದ ರಾತ್ರಿಯವರೆಗೆ ಮೂರು ಹಂತದ ಸಭೆಗಳನ್ನು ನಡೆಸಿದರೂ ಬಣಗುದ್ದಾಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ನಿನ್ನೆ ಮಧ್ಯಾಹ್ನ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅವರು ನಡೆಸಿದ ಮಾಹಿತಿ ಸಂಗ್ರಹ ಸಭೆಗೆ 66 ಶಾಸಕರ ಪೈಕಿ ಕೇವಲ 42 ಮಂದಿ ಮಾತ್ರ ಹಾಜರಾಗಿದ್ದು,
ಈ ಪೈಕಿ 40 ಮಂದಿ ವಿಜಯೇಂದ್ರ ಅಧ್ಯಕ್ಷರಾಗಿ ಮುಂದುವರಿಯಲು ಸಮ್ಮತಿ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.ಇದಾದ ನಂತರ 46 ಮಂದಿ ಮಾಜಿ ಶಾಸಕರು ರಾಧಾ ಮೋಹನ್ ದಾಸ್ ಅವರನ್ನು ಭೇಟಿಯಾಗಿ ಎಲ್ಲರೂ ಒಮ್ಮತದಿಂದ ಹಾಲಿ ಅಧ್ಯಕ್ಷರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯಲು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ರಾತ್ರಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಾಧ್ಯಕ್ಷ ಆಯ್ಕೆಗೆ ಮತದಾರರ ಪಟ್ಟಿ ಸಿದ್ದ ಪಡಿಸುವ ಬಗ್ಗೆ ಚರ್ಚೆ ನಡೆದು ಈ ಬಗ್ಗೆಯೂ ಗೊಂದಲ ಮೂಡಿತು ಎಂದು ತಿಳಿದುಬಂದಿದ್ದು, ಒಟ್ಟಾರೆ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ತಿಳಿದುಬಂದಿದೆ.