ದೇವನಹಳ್ಳಿ: ರಾಜ್ಯದಲ್ಲಿರುವ ಬಡಜನ ವರ್ಗಗಳು ಆರ್ಥಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಉದ್ದೇಶದೊಂದಿಗೆ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಎಂದು ಕಾಂಗ್ರೇಸ್ ಮುಖಂಡ ಶೆಟ್ಟಿಗೆರೆ ರಾಜಣ್ಣ ಹೇಳಿದರು.
ದೇವನಹಳ್ಳಿ ತಾಲೂಕಿನ ಸಾದಹಳ್ಳಿಯ ಫಾರ್ಮ್ಹೌಸ್ ನಲ್ಲಿ ಗಿಡ ನೆಡುವುದರ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದರು.ಬಿಜೆಪಿ ಪಕ್ಷದ ಸುಳ್ಳು ಪ್ರಚಾರಗಳಲ್ಲಿ ನಂಬಿಕೆ ಇಡದೆ ಜನರು ವಾಸ್ತವ ಸ್ಥಿತಿಯಲ್ಲಿ ಯೋಚನೆ ಮಾಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಹಾಗೂ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುತಿದ್ದು ಸ್ವಚ್ಛತೆಗೆ ಆದ್ಯತೆ ನೀಡಿ ಆರೋಗ್ಯವನ್ನು ಗಮನದಲ್ಲಿಡಿ ಎಂದರು.
ಈ ವೇಳೆಯಲ್ಲಿ ಶೆಟ್ಟಿಗೆರೆ ರಾಜಣ್ಣರವರ ಆಪ್ತರು, ಬಂಧುಗಳು, ಸ್ನೇಹಿತರು, ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಶುಭ ಹಾರೈಸಿದರು, ಕಾರ್ಯಕ್ರಮದಲ್ಲಿ ದೊಡ್ಡಜಾಲ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹೇಶ್, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ವಿ.ಸ್ವಾಮಿ, ಮುಖ ಕೆಂಪಣ್ಣ, ಡೇವಿಡ್ ನಾರಾಯಣಸ್ವಾಮಿ, ಮಂಜುನಾಥ್, ಶಾಂತ್ ಕುಮಾರ್ ಪತ್ರಕರ್ತರ ಸಂಘದ ತಾ.ಅಧ್ಯಕ್ಷ ಸುನೀಲ್, ವಿಎ ಹನುಮಂತರಾಯಪ್ಪ, ಶ್ರೀನಿವಾಸ್ ಗಾಂಧಿ ಸೇರಿದಂತೆ ಹಲವಾರು ಕಾಂಗ್ರೇಸ್ ಮುಖಂಡರು ಮತ್ತು ಕಾರ್ಯಕರ್ತರು ಅಭಿಮಾನಿಗಳು ಮತ್ತಿತರರು ಇದ್ದರು.