ಬೆಂಗಳೂರು: ವ್ಯಕ್ತಿಯೊಬ್ಬನನ್ನ ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದಿರುವ ದಾರುಣ ಘಟನೆ ನಗರದ ಕಾಕ್ಸ್ಟೌನ್ ಸಮೀಪ ಇಂದು ನಡೆದಿದೆ.
ಅಜಿತ್(35) ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ.
ಕೊಲೆಯಾದ ಅಜಿತ್ ಐಟಿಸಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ, ಕೆಲಸ ಮುಗಿಸಿ ವಾಪಸ್ ಮನೆಗೆ ಬರುವಾಗ ಕೊಲೆ ನಡೆದಿದೆ. ಮನೆ ಮುಂಭಾಗದಲ್ಲೇ ಅಜಿತ್ ಕೊಲೆಯಾಗಿದೆ.ಬಡ್ಡಿ ಹಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಜಿತ್ ವ್ಯಕ್ತಿಯೊಬ್ಬರಿಂದ ಅಧಿಕ ಬಡ್ಡಿಗೆ ಹಣ ಪಡೆದಿದ್ದನು. ಬಡ್ಡಿ ಹಣ ಮತ್ತು ಅಸಲು ಹಣ ವಾಪಸ್ ವಿಚಾರಕ್ಕೆ ಆರೋಪಿ ಮತ್ತು ಅಜಿತ್ ನಡುವೆ ಗಲಾಟೆ ಆಗುತ್ತಿತ್ತು.
ಇಂದು ಅಜಿತ್ ಮನೆಗೆ ಬರೋದನ್ನೇ ಕಾದು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದಿಂದ ಬಂದು ಆರೋಪಿ ಕೃತ್ಯವೆಸಗಿದ್ದು, ಆರೋಪಿ ಪತ್ತೆಗಾಗಿ ಪುಲಿಕೇಶಿ ನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.