ದೊಡ್ಡಬಳ್ಳಾಪುರ: ಶುದ್ಧ ಕುಡಿಯುವ ನೀರಿಗಾಗಿ ಗಣರಾಜ್ಯೋತ್ಸವ ದಿನ ಮನೆಗಳ ಮೇಲೆ ಕಪ್ಪುಬಾವುಟ ಹಾರಿಸಲು ಮುಂದಾದ ಅರ್ಕಾವತಿ ನದಿ -ಪಾತ್ರದ ಕೆರೆ ಸಂರಕ್ಷಣಾ ವೇದಿಕೆ ಸಮಿತಿ ಸದಸ್ಯರ ಜೊತೆ ಜಿಲ್ಲಾಧಿಕಾರಿ ಗುರುವಾರ ನಡೆಸಿದ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದೆ ಸಭೆ ಮುಕ್ತಾಯವಾಗಿದೆ.ಶುದ್ಧ ಕುಡಿಯುವ ನೀರು ಕೊಡುವ ಸಂವಿಧಾನಬದ್ಧ ಹಕ್ಕು ದೊರೆಯದೇ -ಇದ್ದಾಗ ಗಣರಾಜ್ಯೋತ್ಸವ ಆಚರಣೆಗೆ ಅರ್ಥ ಇಲ್ಲ. ಬದುಕುವ ಹಕ್ಕು ನೀಡುವಂತೆ ಆಗ್ರಹಿಸಿ ಜ.26ರಂದು ಕಪ್ಪುಬಾವುಟ ಹಾರಿಸಲು ಸಮಿತಿ ನಿರ್ಧರಿಸಿತ್ತು.
ಕೈಗಾರಿಕೆಗಳಿಂದ ಕೆರೆಗಳಿಗೆ ಹರಿದು ಬರುತ್ತಿರುವ ಕಲುಷಿತ ನೀರಿನಿಂದ ‘ಅಂತರ್ಜಲ ನೀರು ವಿಷವಾಗಿದೆ. ಕಲುಷಿತ ನೀರನ್ನು ಮೂರು ಹಂತದಲ್ಲಿ ಶುದ್ದೀಕರಣ, ಶುದ್ಧ ಕುಡಿಯುವ ನೀರು ಕೊಡುವ ಭರವಸೆ ಈಡೇರದ ಹೊರತು ಕಪ್ಪು ಬಾವುಟ ಹಾರಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಮಿತಿ ಸದಸ್ಯರು ಹೇಳಿದರು.ಹೋರಾಟ ಸಮಿತಿ ಅಧ್ಯಕ್ಷ ಡಾ.ಟಿ. ಎಚ್.ಅಂಜಿನಪ್ಪ ಮಾತನಾಡಿ, ಕಲುಷಿತ ನೀರು ಆಹಾರಗಳಿಂದಾಗಿ ಇಲ್ಲಿನ ಜನರಿಗೆ ಕಾನ್ಸರ್ ಸೇರಿದಂತೆ ಚರ್ಮ ರೋಗ ಬರುತ್ತಿರುವುದು ತಪಾಸಣೆಯಿಂದ ದೃಢಪಟ್ಟಿದೆ. ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸತೀಶ್, ವ ಸಂತ ಕುಮಾರ್, ಬಿ.ಎಚ್.ಕೆಂಪಣ್ಣ. ಅದಿತ್ಯನಾಗೇ ಶ್,ಟಿ.ಜಿ.ಮಂಜುನಾಥ್, ಅಂಜಿನಪ್ಪ ಮಾತನಾಡಿದರು.ಮಂಜೂರಾತಿ ಪ್ರಕ್ರಿಯೆ ಪ್ರಗತಿಯಲ್ಲಿವೆ, ಕೈಗಾರಿಕೆ ತ್ಯಾಜ್ಯ ನೀರಿನ ಶುದ್ದೀಕರಣ ಘಟಕ (ಎಸ್ಟಿಪಿ) ಮಾಡಲು ಯೋಜನಾ ಸ್ಥಳಾಂತರ ವರದಿ ಸಿದ್ದವಾಗುತ್ತಿದೆ. ಹಣಕಾಸು ಇಲಾಖೆಯ ಬಳಿ ಮಂಜೂರಾತಿಗೆ ಕಡತ ಬಾಕಿ ಇದ್ದು ಅನುಮೋದನೆ ಸದ್ಯದಲ್ಲಿಯೇ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಎನ್.ಶಿವಶಂಕರ್ ಹೇಳಿದರು.
ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಜಕ್ಕಲಮೊಡುಗು ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿರುವುದ ನ್ನು ಮುಂದುವರೆಸಲಾಗುವುದು. ಕಾಡನೂರು ಹಾಗೂ ಅರಳುಮಲ್ಲಿಗೆ ಸಮೀಪ ಕೊಳವೆಬಾವಿ ಕೊರೆಸಿ ನೀರು ತರುವ ಕಾಮಗಾರಿಗೆ ಅನುಮೋದನೆ ದೊರೆತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ. ರೂ.18 ಕೋಟಿ ವೆಚ್ಚದ ಎರಡು ಡಿಪಿಆರ್ ತಯಾರಾಗಿದೆ ಎಂದರು.
ಸಭಾ ನಡಾವಳಿ ದಾಖಲಿಸಿ ವರದಿ ನೀಡುವಂತೆ ಹೋರಾಟ ಸಮಿತಿ ಸದಸ್ಯರು ಆಗ್ರಹಿಸಿದರು.ರೇಷ್ಮೆಗೆ ಬಣ್ಣ: ಸ್ಥಗಿತಕ್ಕೆ ಸೂಚನೆವಸತಿ ಪ್ರದೇಶಗಳಲ್ಲಿರುವ ರೇಷ್ಮೆಗೆ ಬಣ್ಣ ಹಾಕುವ ಸಣ್ಣ ಕೈಗಾರಿಕೆ ಬಂದ್ ಮಾಡಿಸುವಂತೆ ಜಿಲ್ಲಾಧಿಕಾರಿ ಎನ್.ಶಿವಶಂಕರ್ ಮಜರಾಹೊಸಹಳ್ಳಿ ಸಾರ್ವಜನಿಕ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.*ರೇಷ್ಮೆಗೆ ಬಣ್ಣ ಹಾಕುವ ಸಣ್ಣ ಕೈಗಾರಿಕೆಗಳು ಸ್ಥಗಿತಗೊಳಿಸಲು ಸೂಚನೆ*ರಾಸಾಯನಿಕಯುಕ್ತ ನೀರನ್ನು ಶುದ್ದೀಕರಿಸಿದೆ ಒಳಚರಂಡಿ ಮೂಲಕ ಹರಿ ಬಿಡುತ್ತಿದ್ದಾರೆ. ಈ ನೀರಿನಿಂದ ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದರು.
ವಾರ್ಡ್ವಾರು ಸ್ಥಳ ಪರಿಶೀಲನೆ ಮಾಡಿ ರೇಷ್ಮೆ ಬಣ್ಣದ ಘಟಕಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಸಭೆಯಲ್ಲಿದ್ದ ನಗರಸಭೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.ಬಣ್ಣದ ನೀರನ್ನು ಒಳಚರಂಡಿಗೆ ಹರಿದು ಬಿಡದೆ ಸಂಗ್ರಹ ಮಾಡಿಕೊಂಡು ಸೂಕ್ತ ರೀತಿ ಶುದ್ದೀಕರಿಸಿದ ನಂತರ ಹೊರಗೆ ಹರಿ ಬಿಡಬೇಕು. ಸೂಚನೆ ಪಾಲಿಸದ ಕೈಗಾರಿಕೆಗಳನ್ನು ಬಂದ್ ಮಾಡಿಸಿ ವರದಿ ನೀಡುವಂತೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕಅಧಿಕಾರಿ ಡಾ.ಕೆ.ಎನ್.ಅನುರಾಧ, ಉಪವಿಭಾಗಾಧಿಕಾರಿ ಎನ್. ದುರ್ಗಾಶ್ರೀ, ನಗರಾಭಿವೃದ್ಧಿ ಯೋಜನಾಧಿಕಾರಿರಮೇಶ್, ತಹಶೀಲ್ದಾರ್ ವಿಭಾವಿದ್ಯಾ ರಾಠೋಡ್, ಇ.ಒ ಎನ್.ಮುನಿರಾಜು, ನಗರಸಭೆ ಪೌರಾಯುಕ್ತ ಕಾರ್ತಿಕ್ ಈಶ್ವರ್, ಡಿವೈಎಸ್ಪಿ ರವಿ, ಇನ್ಸ್ಪೆಕ್ಟರ್ ಸಾದಿಕ್ ಪಾಷಾ. ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನರಸಿಂಹಮೂರ್ತಿ, ನಿಯಂತ್ರಣ ಮಂಡಲಿ ಅಧಿಕಾರಿ ಭಾಸ್ಕರ್ ಇದ್ದರು.