ಬರ್ಗೆಟ್ ಬಸ್ಯಾ ಎಂಬ ಪಾತ್ರವು ಒಂದು ಕಚೇರಿಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಾ ಇರ್ತಾನೆ.ಕಂಡ ಕಂಡ ಹುಡುಗಿಯರನ್ನೆಲ್ಲ ಪ್ರೀತಿಸಬೇಕೆಂದು ಹಠ ಹಿಡಿಯುತ್ತಾನೆ.ಹುಡುಗಿಯರಿಗೆ ಪ್ರಿಯಕರನಿದ್ದರೂ ಸಹ ನನ್ನನ್ನು ಪ್ರೀತಿಸುವಂತೆ ಕೇಳುತ್ತಾನೆ.
ಸುಮಾರು ಹುಡುಗಿಯರು ಇವನ ಜೀವನದಲ್ಲಿ ಹಾದು ಹೋಗುತ್ತಾರೆ. ಇದರ ಹಿಂದೆ ಏನನ್ನೂ ಹೇಳೋಕೆ ಹೊರಟಿದ್ದಾನೆ ಎಂಬುದಕ್ಕೆ ನೀವು ಈ ಸಿನಿಮಾವನ್ನು ನೋಡಬೇಕಾಗುತ್ತೆ. ಜನವರಿ 9ಕ್ಕೆ ಚಿತ್ರದ ಟೀಸರ್ ಬಿಡುಗಡೆ. ಹಾಗೂ ಚಿತ್ರವನ್ನು ಫೆಬ್ರವರಿ ಅಲ್ಲಿ ರಿಲೀಸ್ ಮಾಡಲು ಸಿದ್ಧತೆಗಳು ನಡೆಯುತ್ತಿದೆ. ರೀಶ್ ಹಿರೇಮಠ್ ನಿರ್ದೇಶನದ ಚಿತ್ರಕ್ಕೆ ನಿರ್ಮಾಪಕರು ನಾಗಾರ್ಜುನ ರೆಡ್ಡಿ. ಪ್ರಮುಖ ಪಾತ್ರದಲ್ಲಿ ರೀಶ್ ಹಿರೇಮಠ ಅಭಿನಯಿಸಿದ್ದಾರೆ.