ರಾಯಚೂರು: ಯಾವುದೇ ಮೀಸಲಾತಿ ಸಂವಿಧಾನ ಪ್ರಕಾರ 50% ಮೀರುವ ಹಾಗಿಲ್ಲ. ಶೇ.97 ಜನ ಹಿಂದುಳಿದ ಮತ್ತು ಉತ್ಪಾದಕ ಸಮುದಾಯದವರು. ಇವರ ಮೀಸಲಾತಿಯನ್ನು ಬಲಿಷ್ಠ ಸಮುದಾಯ ಕೇಳುತ್ತಿರುವುದು ಸಂವಿಧಾನಕ್ಕೆ ಬಗೆಯುತ್ತಿರುವ ಅಪಚಾರ ಎಂದು ಲೇಖಕ ಕುಂ.ವೀರಭದ್ರಪ್ಪ ಖಂಡಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ವಿಚಾರವಾಗಿ, ಆ ಸಮುದಾಯದಲ್ಲಿ ಲ್ಯಾಂಡ್ ಲಾರ್ಡ್ಸ್ ಇದ್ದಾರೆ, ಸಿಎಂ ಆಗಿದ್ದಾರೆ, ದೊಡ್ಡ ಪದವಿ ಅನುಭವಿಸಿದ್ದಾರೆ. ಅದು ಬಹಳ ಮುಂದುವರೆದ ಸಮುದಾಯ. ಸ್ವಾಮೀಜಿ ಬಸವಣ್ಣಕಲ್ಯಾಣ, ಕೂಡಲಸಂಗಮ ಶ್ರೀ ಎಂದು ತಮ್ಮ ನಾಮವಾಚಕದಲ್ಲಿ ಬಳಸಬಾರದು. ಬಸವಣ್ಣ ಹಿಂದುಳಿದ ಸಮುದಾಯಗಳಿಗಾಗಿ ಶ್ರಮಿಸಿದ್ದಾರೆ, ಅವರನ್ನು ದುರುಪಯೋಗ ಮಾಡಿಕೊಳ್ಳಬಾರದು. ಮೀಸಲಾತಿ ಕೇಳಲು ಹಿಂಸೆಯನ್ನು ಪ್ರಚೋದಿಸಬಾರದು ಎಂದು ಜಯಮೃತ್ಯುಂಜಯ ಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.