ಬೆಂಗಳೂರು: ನಗರದ ಬಳೇಪೇಟೆಯಲ್ಲಿರುವ ಉಪಾಹಾರ ದರ್ಶಿನಿ ಹೋಟೆಲಿನಲ್ಲಿ, ಮಹಾತ್ಮ ಜ್ಯೋತಿಬಾಪುಲೆ ಪ್ರಶಸ್ತಿ ಪುರಸ್ಕøತರಾದ ಬಳೇಪೇಟೆ ವೆಂಕಟೇಶ್ರವರ 70ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಮಾತನಾಡಿದ ಬಸವನಗುಡಿ ತ್ಯಾಗರಾಜುರವರು ವೆಂಕಟೇಶ್ರವರು ತಮ್ಮ 14ನೇ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ಹೊತ್ತು ಸಹೋದರ ಸಹೋದರಿಯರ ವಿದ್ಯಾಭ್ಯಾಸ,ಮದುವೆ ಅವರ ಅವಶ್ಯಕತೆ ಪೂರೈಸಿದ್ದಾರೆ.
ಜೊತೆಗೆ ಸಮಾಜದ ಸೇವೆಯಲ್ಲಿ ಅನಾಥ-ವೃದ್ಧಾಶ್ರಮ, ಅಂಗವಿಕಲ ವಿಶೇಷ ಮಕ್ಕಳಿಗೆ ಕುಟುಂಬದಲ್ಲಿ ಜರುಗುವ ಮದುವೆ, ಹುಟ್ಟುಹಬ್ಬ, ಹರಿದಿನಗಳಲ್ಲಿ ಭೋಜನದ ವ್ಯವಸ್ಥೆ ಪಠ್ಯ, ಪುಸ್ತಕ, ಹೊದಿಕೆ, ಅವಶ್ಯಕ ವಸ್ತುಗಳನ್ನು ನೀಡುತ್ತಾರೆ. ಇವರ ಸೇವೆ ಇಂದಿನ ಯುವಕರಿಗೆ ಸ್ಫರ್ತಿಯಾಗಲಿ ಎಂದು ತ್ಯಾಗರಾಜುರವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಧಾರ್ಮಿಕ ಸೇವೆಯಲ್ಲಿ 40 ವರ್ಷಗಳಿಂದ ಶಬರಿಮಲೈ ಅಯ್ಯಪ್ಪ ದೇವಸ್ಥಾನಕ್ಕೆ ಹಾಗೂ 15 ವರ್ಷಗಳಿಂದ ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೂವಿನ ಸರಬರಾಜು ಮಾಡುತ್ತಾರೆ. 1986ರಲ್ಲಿ ಜರುಗಿದ ಕರ್ನಾಟಕ ಸಾರ್ಕ್ ಸಮ್ಮೇಳನಕ್ಕೆ ಪಾಕಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್,ಭೂತಾನ್, ಇತರ ದೇಶಗಳ ಪ್ರಧಾನಿಗಳು ಆಗಮಿಸಿದ್ದ ಸಂದರ್ಭದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ನಂದಿ ಬೆಟ್ಟದವರೆಗೆ ಸ್ವಾಗತಕ್ಕಾಗಿ ಭವ್ಯ ಹೂವಿನ ಅಲಂಕಾರ ಏರ್ಪಡಿಸಿದ್ದು ಕರ್ನಾಟಕ ಸರ್ಕಾರ ವೆಂಕಟೇಶ್ರವರನ್ನು ಅಭಿನಂದಿಸಿದ್ದಾರೆ.
ರಾಜ್ಕುಮಾರ್ ಮತ್ತು ಬಂಗಾರಪ್ಪ ಕುಟುಂಬದವರಿಗೆ ತುಂಬಾ ಆತ್ಮೀಯತೆ ಹೊಂದಿದ್ದಾರೆ. ಬೆಂಗಳೂರು ಬಳೇಪೇಟೆಯಲ್ಲಿ 53ವರ್ಷಗಳಿಂದ ಶ್ರೀ ಅಯ್ಯಪ್ಪಸ್ವಾಮಿ ಪೂಜೆ ಅದ್ದೂರಿಯಾಗಿ ನಡೆಸುತ್ತಾರೆ,ಇವರ ಸೇವೆ ಶ್ಲಾಘನೀಯ ಎಂದು ಬಸವನಗುಡಿ ಡಾ.ತ್ಯಾಗರಾಜುರವರು ತಿಳಿಸಿದರು.
ಸಮಾರಂಭದಲ್ಲಿ ಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ. ಪದ್ಮನಾಗರಾಜು, ವೀಣಾವಾದಕಿ ತ್ರಿಪುರಸುಂದರಿ, ಶ್ರೀಮತಿ ಸಾವಿತ್ರಿಬಾಯಿಜ್ಯೋತಿಬಾಪುಲೆ ಕರ್ನಾಟಕ ರಾಜ್ಯ ಬಲಿಜ ಮಹಿಳಾ ಸಂಘದ ಉಪಾಧ್ಯಕ್ಷೆ ಇಂದುಮತಿ ಮುಕುಂದ, ಸಮಾಜಸೇವಕಿ ಲಕ್ಷ್ಮಿ ಹಾಗೂ ತಿರುಪತಿ ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹ ಸೊಸೈಟಿಯ ಅಧ್ಯಕ್ಷ ದೊಡ್ಡಬಳ್ಳಾಪುರ ಕೆ.ಟಿ.ಹನುಮಂತರಾಜು ರವರು 50ರೂ ಮುಖಬೆಲೆಯ ನೋಟಿನಲ್ಲಿ ಮುದ್ರಣವಾಗಿರುವ ಬಳೇಪೇಟೆ ವೆಂಕಟೇಶ್ರವರ ಜನ್ಮ ದಿನಾಂಕವಾದ 22.09.55 ಕೊಡುಗೆಯಾಗಿ ನೀಡಿದರು, ಎಸ್.ಪಿ.ಆನಂದ್ ಕುಮಾರ್ ಸೇರಿದಂತೆ ಅನೇಕರಿದ್ದರು.