ಬೆಂಗಳೂರು: ಈಗಾಗಲೇ ಬಳ್ಳಾರಿಯ ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದ ಬೆನ್ನಲ್ಲೇಇದೀಗ ಮತ್ತೋರ್ವ ಬಾಣಂತಿ ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ ಐದಕ್ಕೆ ಏರಿದೆ.ಸುಮಾಯ ಬಾನು ಎಂಬಾಕೆಯೇ ಮೃತಪಟ್ಟ ಬಾಣಂತಿ.ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಬಾಣಂತಿಯರ ಸಾವಿನ ಪ್ರಕರಣವನ್ನು ಲೋಕಾಯುಕ್ತರು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಇಂದು ಮಧ್ಯಾಹ್ನ ಲೋಕಾಯುಕ್ತರಿಗೆ ದೂರು ನೀಡಲಿದ್ದಾರೆ.ಬಿಜೆಪಿಯವರು ದೂರು ನೀಡುವ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನನ್ನದು ತಪ್ಪಿದ್ದರೆ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಬಿಜೆಪಿಯವರು ದೂರು ನೀಡಲಿ.
ತನಿಖೆ ನಡೆಯಲಿ ಎಂದಿರುವ ಅವರು, ರಾಜೀನಾಮೆ ವಿಷಯದಲ್ಲಿ ಪ್ರತಿಷ್ಠೆ ಪ್ರಶ್ನೆಯಿಲ್ಲ ಇದೊಂದು ಜೀವದ ವಿಚಾರ. ನಾನು ರಾಜೀನಾಮೆ ಕೊಡುವುದರಿಂದ ಎಲ್ಲಾ ಸರಿಹೋಗುವುದಿದ್ದರೆ ರಾಜೀನಾಮೆ ನೀಡುತ್ತೇನೆ. ಈಗಾಗಲೇ ಪ್ರಕರಣದ ವಿರುದ್ಧ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಐಎಂವಿ ದ್ರಾವಣ ಪೂರೈಸಿರುವವರ ವಿರುದ್ಧವೂ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿರುವ ಅವರು 2024ರಲ್ಲಿ ರಾಜ್ಯದಲ್ಲಿ 327 ಮೆಟರ್ನಲ್ ಸಾವು ಸಂಭವಿಸಿದೆ. ಅವುಗಳ ತನಿಖೆಗೂ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.