ಬೆಂಗಳೂರು: 144 ವರ್ಷಗಳಿಗೊಮ್ಮೆ ಪ್ರಯಾಗ್ರಾಜ್ನ ಪವಿತ್ರ ತ್ರಿವೇಣಿ ಸಂಗಮದಲ್ಲಿ ನೆರವೇರಲಿರುವಂತಹ ಮಹಾಕುಂಭ ಮೇಳ ಅತ್ಯಂತ ವಿಶೇಷವಾದಂತಹದ್ದು. ಈ ಸಮಯದಲ್ಲಿ ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನದಲ್ಲಿ ಪಾಲ್ಗೊಂಡು ಪುನೀತರಾಗಬೇಕೆಂಬುದು ಅಸಂಖ್ಯಾತ ಭಕ್ತಾದಿಗಳ ಮಹಾದಾಶಯ ವಾಗಿದೆ ಎಂದರೆ ತಪ್ಪಗಲಾರದು. ಅದರೆ ಅನಿರ್ವಾಯ ಕಾರಣಗಳಿಂದ ಪ್ರಯಾಗ್ ರಾಜ್ ನ ಪವಿತ್ರ ತ್ರಿವೇಣಿ ಸಂಗಮಕ್ಕೆ ತೆರಳಲು ಸಾಧ್ಯವಾಗದೆ ಇರುವಂತಹ ಭಕ್ತಾದಿಗಳ ಆಶಯಕ್ಕೆ ಪೂರಕವಾಗಿ ಆಯುಷ್ ಟಿವಿ ಮಹಾಶಿವರಾತ್ರಿ ಮಹಾಕುಂಭ ಉತ್ಸವವನ್ನು ಆಯೋಜಿಸಲಾಗಿದೆ.
ಇದೇ ಫೆಬ್ರವರಿ 23 ರಿಂದ 26 ರವರೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಮಹಾಶಿವರಾತ್ರಿ ಮಹಾಕುಂಭ ಉತ್ಸವವು ಫೆಬ್ರವರಿ 23 ರಂದು ಸಂಜೆ 5 ಗಂಟೆಗೆ ಅಘೋರಿಗಳು ಸಾನಿಧ್ಯದಲ್ಲಿ, ವಿವಿಧ ಗಣ್ಯರುಗಳಿಂದ ಉದ್ಘಾಟನೆಗೊಂಡು ಫೆಬ್ರವರಿ 27 ರ ಬೆಳಗ್ಗೆ 6 ಗಂಟೆಯವರೆಗೆ (ಶಿವರಾತ್ರಿ ಆರಾಧನೆ)ಯು ನೆರವೇರಲಿದೆ.
ಈ ಕಾರ್ಯಕ್ರಮದಲ್ಲಿ ಹಲವಾರು ವಿಶೇಷ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಸಾರ್ವಜನಿಕರು ಆಗಮಿಸಿ ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪವಿತ್ರ ತ್ರಿವೇಣಿ ಸಂಗಮದಿಂದ ಭವ್ಯ ಕಳಸದಲ್ಲಿ ಹೊತ್ತು ತಂದಂತಹ ಪವಿತ್ರ ಜಲದ ಸಂಪೋಕ್ಷಣೆಯನ್ನು ಪಡೆಯಬಹುದಾಗಿದೆ.
108 ಭವ್ಯ ಕುಂಭಗಳಲ್ಲಿ ಪವಿತ್ರ ಜಲವನ್ನಿಟ್ಟು ಪೂಜಿಸುವುದಾಗಿದೆ. 108 ಸ್ಪಟಿಕ ಶಿವಲಿಂಗವನ್ನಿಟ್ಟು ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ.ಮಹಾಶಿವರಾತ್ರಿ ಮಹಾಕುಂಭ ಉತ್ಸವದ ಪ್ರಮುಖ ಕಾರ್ಯಕ್ರಮಗಳು : ಉದ್ಯಾನನಗರಿ ಬೆಂಗಳೂರಿನಲ್ಲಿ ಮಹಾಕುಂಭ ಮೇಳದ ಪೂರಕವಾಗಿ ಮಹಾಶಿವರಾತ್ರಿ ಮಹಾಕುಂಭ ಉತ್ಸವ ಆಯೋಜನೆಯೊಂದಿಗೆ ಹಲವು ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಿಮಗಾಗಿ. ಅಘೋರಿಗಳು ಈ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. 6 ಅಡಿ ಮಹಾ ಕುಂಭಕ್ಕೆ ಪ್ರತಿ ಗಂಟೆಗೊಮ್ಮೆ ವಿಶೇಷ ಮಹಾ ಪೂಜೆ .
ಆಯುಷ್ ವಾಹಿನಿಯ ತಂಡ ಪ್ರಯಾಗ್ ರಾಜ್ ಕುಂಭಮೇಳಕ್ಕೆ ತೆರಳಿ ನಾಗ ಸಾಧುಗಳು ಭಕ್ತ ಸಮೂಹದ ಆಶೀರ್ವಾದದೊಂದಿಗೆ ಶಾಸ್ತ್ರೋಕ್ತವಾಗಿ ಪೂಜಿಸಿ ಭವ್ಯ ಕಳಸದಲ್ಲಿ ಹೊತ್ತು ತಂದಂತಹ ಪವಿತ್ರ ತ್ರಿವೇಣಿ ಸಂಗಮದ ಜಲದ ಸಂಪ್ರೋಕ್ಷಣೆ ಕಾರ್ಯ ಸಾರ್ವಜನಿಕರು ಪಾಲ್ಗೊಳ್ಳಬಹುದು. 4 ದಿನಗಳ ಈ ವಿಶೇಷ ಕಾರ್ಯಕ್ರಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಲವು ಧಾರ್ಮಿಕ ಕೈಂಕರ್ಯಗಳ ಆಯೋಜನೆ ಪ್ರತಿ ದಿನ ಬೆಳಗ್ಗೆ 10 ರಿಂದ 12.30 ರವರೆಗೆ ಮಹಾಮೃತ್ಯುಂಜಯ ಹೋಮವನ್ನು ಹಮ್ಮಿಕೊಳ್ಳಲಾಗಿದೆ. ಖ್ಯಾತ ಹಾಸ್ಯ ಕಲಾವಿದರಾದ ಪ್ರಾಣೇಶ್ ಹಾಗೂ ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಹಾಗೂ ಸುಪ್ರಸಿದ್ದ ಹಿನ್ನಲೆ ಗಾಯಕರಿಂದ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ದ್ವಾದಶ ಜ್ಯೋರ್ತಿಲಿಂಗ ಕ್ಷೇತ್ರಗಳಿಂದ ತಂದಂತಹ ಶಿವಲಿಂಗಗಳ ದರ್ಶನ ಭಾಗ್ಯ ಸಾಧ್ಯ. 108 ಭವ್ಯ ಕಳಸ ಸ್ಥಾಪನೆ ಹಾಗೂ ವಿಶೇಷ ಆರತಿಯನ್ನು ವೀಕ್ಷಿಸಬಹುದಾಗಿದೆ. ಇನ್ನು ಮಹಾ ಕುಂಭ ಉತ್ಸವ ಕಾರ್ಯಕ್ರಮದ ಪ್ರಯುಕ್ತ 108 ಸ್ಪಟಿಕ ಲಿಂಗಗಳನ್ನು ವಿವಿಧ ಧಾರ್ಮಿಕ ಸಂಸ್ಥೆಗಳಿಗೆ ದೈನಂದಿನ ಪೂಜೆಗಾಗಿ ನೀಡಲಾಗಿದೆ. ಲೋಕ ಕಲ್ಯಾಣರ್ಥವಾಗಿ 3 ದಿನ ಮಹಾ ಮೃತ್ಯುಂಜಯ ಹೋಮವನ್ನು ಹಮ್ಮಿಕೊಂಡಿದ್ದು. ನಿರಂತರ ಭಗವಂತನ ನಾಮ ಸ್ಮರಣೆಯು ಸಹ ಸಾದ್ಯವಾಗಲಿದೆ. ಇನ್ನು ಪ್ರಯಾಗ್ ರಾಜ್ ನಿಂದ ತರಲ್ಪಟ್ಟ ಭವ್ಯ ಜಲವನ್ನು ಪ್ರಸಾದದ ರೂಪದಲ್ಲಿ ನಿಮ್ಮ ಮನೆಗೆ ಕೊಂಡ್ಯೊಯ್ದು ಮಹಾಕುಂಭ ಮೇಳದ ಕೊನೆಯ ದಿನವಾದ ಶಿವರಾತ್ರಿಯಂದು ನಿಮ್ಮ ಮನೆಯಲ್ಲಿ ಶಾಹಿ ಸ್ನಾನ ಮಾಡುವ ಸದಾವಕಾಶ ಸಾದ್ಯವಾಗಲಿದೆ. ಮಹಾ ಶಿವರಾತ್ರಿ ಮಹಾಕುಂಭ ಉತ್ಸವದಲ್ಲಿ 3 ದಿನಗಳ ಸುದೀರ್ಘ ಮಹಾಮೃತ್ಯುಂಜಯ ಹೋಮವನ್ನು ಆಯೋಜಿಸಿದ್ದು, ಈ ಧಾರ್ಮಿಕ ಕೈಂಕರ್ಯವು ಏಷ್ಯಾನ್ ಬುಕ್ಸ್ ಆಫ್ ರೆಕಾರ್ಡ್ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ನಿರ್ಮಿಸುವ ಪ್ರಯತ್ನವನ್ನು ಸಹ ಮಾಡಲಿದ್ದೇವೆ.
ನಾಲ್ಕು ದಿನಗಳ ವಿಶೇಷ ಕಾರ್ಯಕ್ರಮವನ್ನು ಆಯುಷ್ ವಾಹಿನಿ ಆಯೋಜಿಸಿದ್ದು, ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಆಗಮಿಸಿ ವಿವಿಧ ಧಾರ್ಮಿಕ ಸಾಂಸ್ಕ್ರತಿಕ ಮನೋರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಹಾಶಿವರಾತ್ರಿ – ಮಹಾಕುಂಭ ಉತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹರಿಕೃಷ್ಣ. ಎಂ ಅವರು ಕೋರಿದರು.