ತಿ.ನರಸೀಪುರ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರುಗಡೆ ಕುಂಭಮೇಳ ವಿಶೇಷವಾಗಿ ಫೆ. 09 ರಿಂದ ಆರಂಭವಾದ ಫ್ಯಾಮಿಲಿ ಫನ್ ಫೇರ್ ಎಕ್ಸಿಬಿಷನ್ ಫೆ. 16 ಭಾನುವಾರ ತನಕ ಇರುತ್ತದೆ ಎಂದು ವ್ಯವಸ್ಥಾಪಕ ಮಹೇಂದ್ರ ತಿಳಿಸಿದರು.ಫ್ಯಾಮಿಲಿ ಫನ್ ಫೇರ್ ಎಕ್ಸಿಬಿಷನ್ನಲ್ಲಿ ನೀವು ಬಗೆ ಬಗೆಯ ತಿನಿಸುಗಳು, ಮಕ್ಕಳು ಹಾಗು ವಯಸ್ಕರಿಗೆ ವಿಶೇಷವಾಗಿ ರೋಮಾಂಚಕಾರಿ ಸವಾರಿಗಳು, ಮಹಿಳೆಯರಿಗೆ ಇಷ್ಟವಾಗುವ ಶಾಪಿಂಗ್ ವಸ್ತುಗಳನ್ನು ಒಂದೇ ಸೂರಿಯನ್ನು ಆನಂದಿಸಿ ಕಣ್ತುಂಬಿಕೊಳ್ಳಬಹುದು.
ಮಕ್ಕಳಿಗೆ ಪ್ರಿಯವಾಗುವ ತಾಣ ಮಕ್ಕಳನ್ನು ಕರೆದೊಯ್ಯುವ ಪರ್ಯಾಯವಾಗಿ ಈ ಎಕ್ಸಿಬಿಷನ್ಗೆ ಒಮ್ಮೆ ಕರೆದುಕೊಂಡು ಹೋಗಿ. ಇಲ್ಲಿ ಸಾಕಷ್ಟು ಸವಾರಿಗಳಿವೆ. ಮಕ್ಕಳಿಗೆ ಪ್ರಿಯವಾಗುವ ಕಾರ್ ಓಟ, ನವಿಲು, ಆಹಾರಗಳು, ಗ್ಯಾಲಕ್ಸಿ ಥೀಮ್, ಮೋಜು ಮಾಡಲು ವಯಸ್ಕರಿಗೆ ಆಟಗಳು ಸೇರಿದಂತೆ ಇನ್ನು ಥ್ರಿಲ್ಲಿಂಗ್ ಆಕರ್ಷಣೆಗಳಿವೆ. ಪ್ರತಿದಿನ ಸಂಜೆ 4 ಗಂಟೆಗೆ ಶುರುವಾಗುತ್ತದೆ.
ಒಟ್ಟು 10 ಕ್ಕೂ ಹೆಚ್ಚು ರೋಮಾಂಚಕ ಸವಾರಿಗಳಿವೆ. ಮಕ್ಕಳಿಗೆ ಪ್ರಿಯವಾಗುವ ಆಹಾರಗಳು ಜ್ಯೂಸ್, ಗೋಬಿ, ಸೇವ್ ಪುರಿ, ಬಜ್ಜಿ, ಆಲೂಗಡ್ಡೆ ರಿಂಗ್, ಪಾಪಡ್ ಸೇರಿದಂತೆ ಇನ್ನು ಅನೇಕ ಆಹಾರಗಳನ್ನು ಇಲ್ಲಿ ಸವಿಯಬಹುದು.
ಇನ್ನು ಈ ಎಕ್ಸಿಬಿಷನ್ ವಿಶಾಲವಾದ ಸ್ಥಳದಲ್ಲಿ ಹರಡಿರುವ ಈ ಫನ್ ವರ್ಲ್ಡ್ ಶಾಪಿಂಗ್ ಮಾಡಲು, ಡ್ರ್ಯಾಗನ್ ಟ್ರೈನ್ನಲ್ಲಿ ಸವಾರಿ ಮಾಡಲು, ಮಕ್ಕಳಿಗೆ ಪ್ರಿಯವಾದ ಆಹಾರಗಳನ್ನು ತಿನ್ನಿಸಲು, ಥ್ರಿಲ್ಲಿಂಗ್ ಆಟವಾಡಲು ಬೆಸ್ಟ್ ಆಗಿದೆ. ರೋಮಾಂಚಕ ಚಟುವಟಿಕೆಗಳನ್ನು ಆನಂದಿಸಲು ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ವಿಶಾಲವಾದ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.