ದೇವನಹಳ್ಳಿ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬುದ್ದತ್ವದ ಶಾಂತಿ, ತಾಳ್ಮೆ, ಪ್ರೀತಿ, ಸಮಾನ ಮನೋಭಾವದಿಂದ ಹೋರಾಟಗಳನ್ನು ಮಾಡಿ ಇಡೀ ದೇಶದ ಪ್ರತಿಯೊಬ್ಬರಿಗೂ ಅನ್ವಹಿಸುವ ಸಂವಿಧಾನ ರಚಿಸಿರುವುದು, ಅಸ್ಪ್ರೃಶ್ಯತೆ, ಜಾತೀಯತೆವಿರುದ್ದ ಉತ್ತಮ ಶಿಕ್ಷಣ ಮತ್ತು ಸನ್ನಡತೆಯ ಮೂಲಕ ಸ್ವಾಭಿಮಾನದ ಬದುಕು ಸಾಧಿಸುವಂತೆ ಪ್ರೇರಣೆ ನೀಡಿದರು ಹಾಗಾಗಿ ಇಂದಿನ ಮಕ್ಕಳುಬುದ್ದ, ಬಸವ ಮತ್ತು ಅಂಬೇಡ್ಕರ್ ಅವರ ದಾರಿಯಲ್ಲಿ ನಡೆದರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಆರ್ ಪಿ ಐ ಸಂಘಟನೆಯ ರಾಜ್ಯಧ್ಯಕ್ಷರಾದ ಎನ್.ವೆಂಕಟಸ್ವಾಮಿ ಹೇಳಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದ ಹತ್ತಿರವಿರುವ ಸಂತೆ ಮೈದಾನದಲ್ಲಿ ಬಹುಜನ ಸಮಿತಿ ವತಿಯಿಂದ ಮಹಾತ್ಮ ಹಾಗೂ ಮಾನವತಾವಾದಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ವರ್ಷದ ಪರಿನಿಬ್ಬಾಣ ಹಾಗೂ ವಿಚಾರ ಅರಿವು ಆಂದೋಲನ ಕಾರ್ಯಕ್ರಮವನ್ನು ಅನಿರುದ್ದ
ಬಂತೇಜಾ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ದೇವನಹಳ್ಳಿ ತಾಲೂಕು ತಹಸೀಲ್ದಾರ್ ಎಚ್.ಬಾಲಕೃಷ್ಣ ಉದ್ಘಾಟಿಸಿ ಮಾತನಾಡಿದರು.
ಲಂಡನ್ನಿನ ಸಿಎನ್ಎನ್ಐಬಿ ಮಾಧ್ಯಮದ ಸಮೀಕ್ಷೆ ಸ್ವಾತಂತ್ರ್ಯದ ನಂತರ ಪ್ರಭಾವೀತರು ಬಾಬಾಸಾಹೇಬ್ ಅಂಬೇಡ್ಕರ್ ಘೋಷಿಸಿ ಗೌರವಿಸುತ್ತದೆ, ಆದರೆ ನಮ್ಮ ಭಾರತ ದೇಶದಲ್ಲಿ ಮಾತ್ರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಗೌರವ ಇತ್ತೀಚೆಗೆಪ್ರಬಲತೆ ಕಾಣುತ್ತಿದ್ದು, ಇದುವರೆಗೂ ಅಂಬೇಡ್ಕರ್
ಹೋರಾಟದ ಪಲಾನುಭವಿಗಳು ಸಮಾಜಕ್ಕೆ ಕೊಡುಗೆನೀಡತ್ತಾರೆ ಅಂದರೆ ವಿಮುಖರಾಗುತ್ತಿರುವುದು ವಿಷಾದನೀಯ ಸಂಗತಿ ಎಂದರು.
ಅನಿರುದ್ದ ಬಂತೇಜಾ ಸ್ವಾಮೀಜಿ ಮಾತನಾಡಿ ಸೃಷ್ಟಿಯಲ್ಲಿ ಎಲ್ಲರೂ ಸಮಾನರು, ಧರ್ಮದ ಮೇಲೆ ಗೌರವ ಪರಸ್ಪರರ ಪ್ರೀತಿಯ ಭಾವನೆಯಿಂದ ಶರಣಾಗಬೇಕು, ವೈಜ್ಞಾನಿಕ ನಂಬಿಕೆಗಳ ಮೇಲೆ ವಿಷಯಗಳು ಆಚರಣೆಗಳು ಮುಂದುವರಿಯಬೇಕು ಹಾಗೂ ಬಾಬಾ ಸಾಹೇಬರ ಕೊನೆಯ ಮಾತಿನಂತೆ ನನ್ನ ಹೋರಾಟದ ರಥಯಾತ್ರೆಯನ್ನು ಕೈಯಲಾದರೆ ಮುಂದೆ ತನ್ನಿ ಆದರೆ ಎಂದಿಗೂ ಹಿಂದೆ ಸರಿಸಬೇಡಿ ಎಂದರು.
ಬಹುಜನ ಸೇವಾಸಮಿತಿ ರಾಜ್ಯಾಧ್ಯಕ್ಷ ಪೂಜಪ್ಪ ಮಾತನಾಡಿ ಭಾರತದೇಶದಲ್ಲಿ ಪ್ರತಿಯೊಬ್ಬರೂ ಸರಿ ಸಮಾನರೂ ಸಾಧ್ಯವಾದರೆ ಶೋಷಿತರಾದವರಿಗೆ ಸಹಾಯ ಮಾಡಿ ಇಲ್ಲವಾದಲ್ಲಿ ಸುಮ್ಮನಿರಿ ಯಾರಿಗೂ ಜಾತಿಭೇಧಭಾವ ದ್ವೇಷದಿಂದ ತೊಂದರೆಗಳು ನೀಡಬೇಡಿ ಎಂದು ಹೇಳಿದರು.ಪ್ರಜಾವಿಮೋಚನಾ ಚಳುವಳಿ(ಎಸ್) ರಾಜ್ಯ ಕಾರ್ಯದರ್ಶಿ ದಾಸರಬೀದಿ ಮುರಳಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರವರ ಆಶಯದಂತೆ ಅವರ ಸಂವಿಧಾನದ ರಥವನ್ನು ಮುನ್ನಡೆಸುವ ಜವಬ್ದಾರಿ ನಮ್ಮೆಲ್ಲರದು, ಪ್ರತಿಯೊಬ್ಬರು ಜೀವನದಲ್ಲಿ ಮಹಾ ನಾಯಕನ ಆದರ್ಶಗಳು ಮತ್ತು ತತ್ವ ಸಿದ್ಧಾಂತಗಳನ್ನು ಪಾಲಿಸಿದ್ದಲ್ಲಿ ಮಾತ್ರ ಅವರಿಗೆ ನಿಜವಾದ ನಮನಗಳನ್ನು ಸಲ್ಲಿಸಿದಂತೆ ಎಂದರು.
ಬಾಲು ಜಂಬೇ ತಂಡದಿಂದ ಸಮಾಜ ಸುಧಾರಕರಾದ ಬಸವಣ್ಣ ಮತ್ತು ಡಾ.ಬಿ.ಆರ್.ಅಂಬೇಡ್ಕರ ಅವರ ಚರಿತ್ರೆಯ ಗೀತಗಾಯನ ಮತ್ತು ಮಾಜಿ ಸಚಿವೆ, ಹಿರಿಯ ಸಾಹಿತಿಗಳಾದ ಬಿ.ಟಿ .ಲಲಿತಾನಾಯಕ್ ಅವರು ಅಂಬೇಡ್ಕರ್ ಅವರ ನಡೆ ನುಡಿ ಆದರ್ಶದ ವ್ಯಕ್ತಿತ್ವದ ಮೂಲಕ ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ತಿಳಿಸುವ ಹಾಡಿಗಳನ್ನು ಹಾಡುವುದರ ಮೂಲಕ ನೆರದಿದ್ದ ಜನರನ್ನು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಮಾಡಿ, ತಾಲೂಕಿನ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿಬಿ.ಎಸ್.ಎಸ್. ರಾಜ್ಯಗೌರವಾಧ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ಎಸ್ .ಎಲ್. ಎನ್ ಲಕ್ಮೀನಾರಾಯಣಪ್ಪ, ನಾಗವೇಣಿ, ಬಹುಜನ ಸೇವಾ ಸಮಿತಿ ರಾಜ್ಯಪ್ರಧಾನ ಕಾರ್ಯದರ್ಶಿ ಕಾರಳ್ಳಿ ಮುನಿರಾಜು, ರಾಜ್ಯ ಹಿಂದುಳಿದ ವರ್ಗಗಳ ಕಾರ್ಯದ್ಯಕ್ಷ ಜೊಸೇಪ್, ತಾಲೂಕು ಕಾರ್ಯದ್ಯಕ್ಷ ಮಾರುತಿ, ನಗರ ಹಿಂದುಳಿದ ಘಟಕದ ಕಾರ್ಯದರ್ಶಿ ನರಸಿಂಹಮೂರ್ತಿ, ಪಲ್ಲವಿ ಸೇರಿದಂತೆ ಹಲವಾರು ಮುಖಂಡರು, ತಾಲೂಕಿನ ಅಂಗನವಾಡಿ ಶಿಕ್ಷಕಿಯರು, ಆಸಾಕಾರ್ಯಕರ್ತೆಯರು ಮತ್ತು ಶಾಲಾಮಕ್ಕಳು ಭಾಗಿಯಾಗಿದ್ದರು.