ಕರಾಚಿ: ಮೊದಲ ಪಂದ್ಯದಲ್ಲೇ ಪಾಕ್ ಸೋಲನಪ್ಪಿದ ನಂತರ, ಪಾಕಿಸ್ತಾನ ತಂಡದ ಬ್ಯಾಟ್ಸ್ಮನ್ ಬಾಬರ್ ಆಜಂ ನಿಧಾನಗತಿಯ ಆಟಕ್ಕೆ ಟೀಕೆಗಳ ಸುರಿಮಳೆಯೇ ಹರಿದಿದೆ.
ಪಾಕಿಸ್ತಾನ ತಂಡವು ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ತನ್ನ ಮೊದಲ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ 60 ರನ್ಗಳಿಂದ ಸೋಲನುಭವಿಸಿತು. ಈ ಪಂದ್ಯವು ಬುಧವಾರ ಕರಾಚಿಯಲ್ಲಿ ನಡೆದಿದ್ದು, 321 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟ್ಸ್ಮನ್ಗಳು ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ಹಿನ್ನಡೆ ಅನುಭವಿಸಿದರು.
ಬಾಬರ್ ಆಜಂ ಅವರ ನಿಧಾನಗತಿಯ ಬ್ಯಾಟಿಂಗ್ ಶೈಲಿಯನ್ನು ರವಿಚಂದ್ರನ್ ಅಶ್ವಿನ್ “ಆಮೆ ಮತ್ತು ಮೊಲದ ಕಥೆ”ಗೆ ಹೋಲಿಸಿದ್ದಾರೆ.. ಪಾಕಿಸ್ತಾನ ತಂಡದ ಮುಂದಿನ ಪಂದ್ಯವು ಭಾರತದ ವಿರುದ್ಧ ನಡೆಯಲಿದ್ದು, ಇದು ಅವರಿಗೆ ನಿರ್ಣಾಯಕ ಪಂದ್ಯವಾಗಿದೆ.ಪಾಕಿಸ್ತಾನ ತಂಡವು ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ತನ್ನ ಮೊದಲ ಪಂದ್ಯವನ್ನು ಬುಧವಾರ ಕರಾಚಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದು, ನ್ಯೂಜಿಲೆಂಡ್ ತಂಡವು 320 ರನ್ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಪಾಕಿಸ್ತಾನ ತಂಡವು ಈ ಗುರಿಯನ್ನು ಬೆನ್ನಟ್ಟಲು ವಿಫಲವಾಗಿದ್ದು 60 ರನ್ಗಳಿಂದ ಸೋಲನುಭವಿಸಿತು.