ಬೆಂಗಳೂರು: `ಬಾರ್ನ್ ಡಿಜಿಟಲ್. ಬಾರ್ನ್ ಅಜೈಲ್’, ಮೈಂಡ್ಫುಲ್ ಐಟಿ ಕಂಪನಿ ಆಗಿರುವ ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಲಿಮಿಟೆಡ್ ಸಂಸ್ಥೆಯು ಹ್ಯಾಪಿಯೆಸ್ಟ್ ಮೈಂಡ್ಸ್ ರನ್ನ ಐದನೇ ಆವೃತ್ತಿಯನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿರುವ ಕಂಠೀರವ ಸ್ಟೇಡಿಯಂನಲ್ಲಿ ಜನವರಿ 19 ಭಾನುವಾರದಂದು ಆಯೋಜಿಸಿತ್ತು.
ಅದೇ ದಿನ ದೇಶದ ಇನ್ನಿತರ ಮೂರು ಸ್ಥಳಗಳಲ್ಲಿ (ಭುವನೇಶ್ವರ, ನೋಯ್ಡಾ ಮತ್ತು ಪುಣೆ) ಈ ಹ್ಯಾಪಿಯೆಸ್ಟ್ ರನ್ ಕಾರ್ಯಕ್ರಮ ನಡೆದಿದ್ದು, ಒಟ್ಟು 1000ಕ್ಕೂ ಹೆಚ್ಚು ಮಂದಿ ಓಟದಲ್ಲಿ ಭಾಗವಹಿಸಿದರು. ಈ ವರ್ಷ ಬಾಲಕಿಯರಿಗೆ ಸ್ಟೆಮ್ ಶಿಕ್ಷಣವನ್ನು ನೀಡುವ ಉದ್ದೇಶ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ನನ್ಹಿ ಕಾಲಿ ಎನ್ಜಿಓಗೆ ರೂ.10 ಲಕ್ಷ ಮೊತ್ತವನ್ನು ನೀಡಲಾಗಿದೆ. ಅಯೋನ್, ಐಸಿಐಸಿಐ ಬ್ಯಾಂಕ್ ಮತ್ತು ಆರ್ಬಿಎಲ್ ಬ್ಯಾಂಕ್ ಈ ಓಟದ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.
ಹ್ಯಾಪಿಯೆಸ್ಟ್ ಮೈಂಡ್ಸ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜೋಸೆಫ್ ಅನಂತರಾಜು ಅವರು, “ಆರೋಗ್ಯಕ್ಕೆ ಫಿಟ್ ನೆಸ್ ಕಾಪಾಡಿಕೊಳ್ಳುವುದೇ ಪ್ರಮುಖವಾದುದು, ಹಾಗಾಗಿ ಫಿಟ್ ನೆಸ್ ಅನ್ನು ಗೌರವಿಸುವ ವ್ಯಕ್ತಿಯಾಗಿ ಈ ಸ್ಪೂರ್ತಿದಾಯಕ ಯೋಜನೆಯ ಭಾಗವಾಗಲು ನಾನು ಉತ್ಸುಕನಾಗಿದ್ದೇನೆ” ಎಂದು ಹೇಳಿದರು.ಹ್ಯಾಪಿಯೆಸ್ಟ್ ಮೈಂಡ್ಸ್ನ ಚೀಫ್ ಪೀಪಲ್ ಆಫೀಸರ್ ಸಚಿನ್ ಖುರಾನಾ, ಡಾ.ಕಿರಣ್ ವೆಗಾಸ್, ಪಾಲ್ ಜಾಕೋಬ್, ಹೇಮಂತ ಲೆಂಕಾ, ಪಾಯಲ್ ಜಾತಕಿಯಾ, ಆಂಚಲ್ ಶೆಟ್ಟಿ, ಸಚಿ ಜಾಗಿರ್ದಾರ್, ರೇಷಿಕಾ ಇ, ಸಲೋನಿ ಜೈನ್ ಮತ್ತು ದೀಕ್ಷಾ ಪ್ರಿಯಾ ಮುಂತಾದವರು ಹ್ಯಾಪಿಯೆಸ್ಟ್ ರನ್ ಸಮಿತಿಯ ಸಮಿತಿಯಲ್ಲಿದ್ದು ಕಾರ್ಯನಿರ್ವಹಿಸಿದರು. ಈ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ದುಡಿದರು.